Advertisement

ಮುಂಡಗೆಮನೆ ತೋಟಕ್ಕೆ ಬೆಂಕಿ; ಕೋಟ್ಯಂತರ ರೂಪಾಯಿ‌ ನಷ್ಟ

02:58 PM May 21, 2023 | Team Udayavani |

ಶಿರಸಿ: ಕಳೆದ ರಾತ್ರಿ ಆಕಸ್ಮಿಕವಾಗಿ ಬಿದ್ದ ಬೆಂಕಿಗೆ ಎಕರೆಗೂ ಅಧಿಕ ವಿಸ್ತೀರ್ಣದ ಅಡಿಕೆ ತೋಟ ಸಂಪೂರ್ಣ ಸುಟ್ಟು ಕರಕಲಾದ ಘಟನೆ ತಾಲೂಕಿನ ಹೆಗಡೆಕಟ್ಟ ಪಂಚಲಿಂಗ ಪಕ್ಕದ ಮುಂಡಗೆಮನೆಯಲ್ಲಿ ನಡೆದಿದೆ.

Advertisement

ಇಲ್ಲಿನ ನಾಲ್ವರು ರೈತರಿಗೆ ಸಂಬಂಧಿಸಿದ ಅಡಿಕೆ ತೋಟ ಅಗ್ನಿಗೆ ಬಲಿಯಾಗಿದ್ದು, ಮುಂದೇನು ಎಂಬ ಚಿಂತೆ‌ ಕಾಡಿದೆ. ಶಿರಸಿ ತಾಲೂಕಿನಲ್ಲೇ ಕಳೆದ ಒಂದು ತಿಂಗಳುಗಳ ಈಚೆಗೆ ಕಲಕೈ, ಅಮಚಿಮನೆ ತೋಟಗಳು ಸುಟ್ಟ ವರದಿಯ ಬೆನ್ನಲ್ಲೇ ಮುಂಡಿಗೆಮನೆ ತೋಟದ ಸರಕೆ ಬೆಂಕಿ ಬಿದ್ದಿದೆ.  ತಡ ರಾತ್ರಿ 2 ಗಂಟೆ ಸುಮಾರಿಗೆ‌ ಬೆಂಕಿ ತಗುಲಿದ್ದು, ಇದು ಹೆಗಾಗಿದೆ ಎಂಬುದೇ ತಿಳಿಯದಾಗಿದೆ ಎನ್ನಲಾಗಿದೆ. ಮುಂಡಗೆಮನೆಯಿಂದ ಕಾಣದಷ್ಟು ದೂರದಲ್ಲಿ ಬೆಂಕಿ ಬಿದ್ದಿದ್ದು ಪಕ್ಕದ ಹಳ್ಳಿಯವರೊಬ್ಬರಿಗೆ ಬೆಂಕಿ‌ ಬೆಳಕು ಕಂಡು ಇಲ್ಲಿಗೆ ಬಂದು‌ ಮಾಹಿತಿ ತಿಳಿಸಿದ ಬಳಿಕ ಬೆಂಕಿ ನಂದಿಸಲು ಓಡಿದ್ದಾರೆ.

ಮುಂಡಗೆಮನೆ ತೋಟ ಬಹು ಬೆಳೆಯ ಸಮೃದ್ಧ ತೋಟವಾಗಿದ್ದು ಈಗ ಬಾಳೆ, ಏಲಕ್ಕಿ, ಕಾಳು ಮೆಣಸು, ಅಡಿಕೆ ಸೇರಿದಂತೆ‌ ಬಹು ಬೆಳೆಗೂ ಹಾನಿಯಾಗಿದೆ. ಬೇಸಗೆಯ ಕಾಲದಲ್ಲಿ ಭೂಮಿ ಕಾಯಬಾರದು, ಮಳೆಗಾಲದಲ್ಲಿ  ಮೇಲ್ಮಣ್ಣು ತೊಯ್ಯಬಾರದು ಎಂದು ಹಾಕಲಾದ ದಪ್ಪನೆಯ ಕರಡ, ದರಕುಗಳಿಗೆ ಅಗ್ನಿ ತಗುಲಿ ಸಂಪೂರ್ಣ ಸುಟ್ಟೋಗಿದೆ. ಗೋಪಾಲಕೃಷ್ಣ ಹೆಗಡೆ ಸಹೋದರರಿಗೆ ಸಂಬಂಧಿಸಿದ ಸುಮಾರು ‌ಎಂಟು ಬಣ್ಣದ ಸುಮಾರು‌ ಅರ್ಧ ಎಕರೆಗೂ ಅಧಿಕ ತೋಟ, ಮಧುಕೇಶ್ವರ ಹೆಗಡೆ ಅವರಿಗೆ ಸಂಬಂಧಿಸಿದ‌ 15 ಗುಂಟೆ  ತೋಟ, ಈಶ್ವರ ಹೆಗಡೆ ಕೊರಟಿಬೈಲಿನ ಹಾಗೂತಿಮ್ಮಾಣಿ ದೀಕ್ಷಿತರಿಗೆ ಸಂಬಂಧಿಸಿದ ಎಂಟತ್ತು ಗುಂಟೆ ತೋಟ ಹಾನಿಯಾಗಿದೆ. ರಾತ್ರಿ ಸುದ್ದಿ ತಿಳಿದ ಗ್ರಾಮಸ್ಥರು ಆಗಮಿಸಿ ಬೆಂಕಿ ಆರಿಸಲು ಬೆಳಗಿನ ತನಕ‌ ಶ್ರಮಿಸಿದರು.

ಒಂದು ಅಡಿಕೆ ತೋಟಕೆ ಹಾನಿ‌ ಎಂದರೆ ಈ ವರ್ಷದ ಬೆಳೆ ಜೊತೆ ಅರೆಂಟು ವರ್ಷದ ಬೆಳೆ‌ ಕೂಡ‌ ಸಿಗದಂತೆ ಆಗಲಿದೆ. ಬೆಳೆಯ ಮರು‌ ನಾಟಿ ಕೂಡ ವೆಚ್ಚದಾಯಕ ಆಗಲಿದೆ.

ಸಮೃದ್ದ ತೋಟಕ್ಕೆ ಬೆಂಕಿ ತಗುಲಿದ್ದಾದರೂ ಹೇಗೆ ಎಂಬುದು ಗೊತ್ತಾಗುತ್ತಿಲ್ಲ. ಹೀಗಾಗಿದ್ದು ಬದುಕು ಕಷ್ಟಕೆ ದೂಕುವಂತೆ ಆಗಿದೆ.-ಗೋಪಾಲಕೃಷ್ಣ ಹೆಗಡೆ ಮುಂಡಗೆಮನೆ, ಪ್ರಗತಿಪರ ರೈತ

Advertisement
Advertisement

Udayavani is now on Telegram. Click here to join our channel and stay updated with the latest news.

Next