ಕೋಲ್ಕತ್ತಾ: ಬಹುಮಹಡಿ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ನಡೆದು, ರಕ್ಷಣೆ ಧಾವಿಸಿದವರೂ ಸೇರಿ ಒಂಬತ್ತು ಮಂದಿ ಸಾವನ್ನಪ್ಪಿದ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ.
ಘಟನೆಯಲ್ಲಿ ನಾಲ್ಕು ಅಗ್ನಿ ಶಾಮಕ ದಳ ಸಿಬ್ಬಂದಿ, ಇಬ್ಬರು ಆರ್ ಪಿಎಫ್ ಜವಾನರು ಮತ್ತು ಓರ್ವ ಪೊಲೀಸ್ ಎಎಸ್ ಐ ಸಾವನ್ನಪ್ಪಿದ್ದಾರೆ.
ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಕೋಲ್ಕತ್ತಾ ಸ್ಟ್ರಾಂಡ್ ರೋಡ್ ನಲ್ಲಿರುವ ನ್ಯೂ ಕೋಲ್ಕತ್ತಾ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪೊಲೀಸ್ ವರಿಷ್ಠಾಧಿಕಾರಿ ಸೌಮೇನ್ ಮಿತ್ರಾ , ಸಚಿವ ಸುಜಿತ್ ಬೋಸ್ ಮತ್ತು ಜಂಟಿ ವರಿಷ್ಠಾಧಿಕಾರಿ ಮುರಳೀಧರ್ ಸ್ಥಳದಲ್ಲಿದ್ದಾರೆ.
ಇದನ್ನೂ ಓದಿ:ಬಂಗಾರದಿಂದ ಸಿಂಗಾರಗೊಂಡ ಬಜರಂಗ್: ಚಿನ್ನ ಉಳಿಸಿಕೊಂಡು ನಂ.1 ಸ್ಥಾನಕ್ಕೆ ಮರಳಿದ ಸಾಧನೆ
ಸೋಮವಾರ ರಾತ್ರಿ 8.30ರ ವೇಳೆಗೆ ಕಟ್ಟಡದ 13ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸಿಬ್ಬಂದಿ 13ನೇ ಮಹಡಿಗೆ ಲಿಫ್ಟ್‌ನಲ್ಲಿ ತೆರಳಿದ್ದರು. ಅತಿಯಾದ ಬಿಸಿ ಮತ್ತು ಉಸಿರುಗಟ್ಟುವಿಕೆಯಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಎಂ ಮಮತಾ ಬ್ಯಾನರ್ಜಿ ಸೋಮವಾರ ರಾತ್ರಿ ಸ್ಥಳಕ್ಕೆ ತೆರಳಿ ಮಾಹಿತಿ ಪಡೆದರು. ಇದು ತುಂಬಾ ದುಖಃದ ವಿಚಾರ. ಮೃತಪಟ್ಟವರ ಕುಟುಂಬಕ್ಕೆ ತಲಾ ಹತ್ತು ಲಕ್ಷ ರೂ. ಮತ್ತು ಕುಟುಂಬದ ಓರ್ವ ಸದಸ್ಯನಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಹೇಳಿದರು.
ಇದನ್ನೂ ಓದಿ: ರಾಮಸಮುದ್ರ ಕೆರೆ ಮಲಿನ ತಡೆಗೆ ಬೇಕು ಕಣ್ಗಾವಲು!