Advertisement

ಬೆಂಕಿ ರಾಜಕೀಯ

06:35 AM Oct 02, 2017 | Harsha Rao |

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮುನ್ನವೇ ಜಿದ್ದಾ – ಜಿದ್ದಿನ ರಾಜಕೀಯದಲ್ಲಿ ತೊಡಗಿರುವ ಆಡಳಿತಾರೂಢ ಕಾಂಗ್ರೆಸ್‌ ಮತ್ತು ಪ್ರತಿಪಕ್ಷ ಬಿಜೆಪಿ ಮಧ್ಯೆ ಇದೀಗ “ಬೆಂಕಿ ರಾಜಕೀಯ’ ತೀವ್ರಗೊಂಡಿದೆ. ಪರಸ್ಪರರ ವಿರುದಟಛಿ ಸಮಾಜಕ್ಕೆ ಬೆಂಕಿ ಹಚ್ಚುವವರು ಎಂಬ ಆರೋಪ – ಪ್ರತ್ಯಾರೋಪಗಳನ್ನು ಮಾಡುತ್ತಾ ಕೆಸರೆರಚಾಡುತ್ತಾ ರಾಜಕೀಯ ಲಾಭ ಗಳಿಸಲು ಉಭಯ ಪಕ್ಷಗಳೂ ಪ್ರಯತ್ನಿಸುತ್ತಿವೆ.

Advertisement

ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಮಧ್ಯೆ ಮಾತಿನ ಸಮರ ನಡೆಯುವುದು ಸಾಮಾನ್ಯ. ಆದರೆ, ಈ ಬಾರಿ ಚುನಾವಣೆಗೂ ಮುನ್ನವೇ ವಾಗ್ಧಾಳಿ, ಮಾತಿನ ಸಂಘರ್ಷವು ತೀವ್ರ ಸ್ವರೂಪಕ್ಕೆ ತಿರುಗಿದ್ದು, ಬಿಜೆಪಿಯವರು ಬೆಂಕಿ
ಹಚ್ಚುವವರು ಎಂದು ಕಾಂಗ್ರೆಸ್‌ ಆರೋಪಿಸಿದರೆ, ಕಾಂಗ್ರೆಸ್‌ನವರೇ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಪ್ರತ್ಯಾರೋಪ ಮಾಡುತ್ತಿದೆ. ಭಾನುವಾರ ನಗರದಲ್ಲಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, “”ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈಯಲ್ಲಿ ಪೆಟ್ರೋಲ್‌ ಮತ್ತು ಬೆಂಕಿ ಪೊಟ್ಟಣ ಹಿಡಿದುಕೊಂಡು ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇವರು ರಾಜ್ಯದ ಪಾಲಿಗೆ ಬೆಂಕಿರಾಮಯ್ಯ
ಆಗಿದ್ದಾರೆ” ಎಂದು ಹೇಳಿದ್ದಾರೆ. ಇದಕ್ಕೆ ಚಿತ್ರದುರ್ಗದಲ್ಲಿ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ,
ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವುದು ಬಿಜೆಪಿ ಮತ್ತು ಆರ್‌ಎಸ್‌ಎಸ್‌. ಧರ್ಮದ ಹೆಸರಿನಲ್ಲಿ ಈ ಕೆಲಸ ಮಾಡುತ್ತಿದೆ. ಮುಂದಿನ ಬಾರಿಯೂ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಆಗ ಇವರು ಹಚ್ಚುವ ಬೆಂಕಿ ನಂದಿಸುತ್ತೇವೆ” ಎಂದಿದ್ದಾರೆ.

ಆಗಸ್ಟ್‌ನಲ್ಲೆ ಶುರುವಾಗಿತ್ತು: ಬೆಂಕಿ ಹಚ್ಚುವ ಆರೋಪ ಆರಂಭವಾಗಿದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕಳೆದ ಆಗಸ್ಟ್‌ನಲ್ಲಿ ಬೆಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ. “ಅಮಿತ್‌ ಶಾ ಅವರು ಬೆಂಗಳೂರಿಗೆ ಬಂದು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ನೋಡು ತ್ತಿದ್ದಾರೆ. ಕೋಮು- ಸಂಘರ್ಷದ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಆರೋಪಿಸಿತ್ತು. ಇದಕ್ಕೆ ತಿರುಗೇಟು ನೀಡಿದ್ದ ಬಿಜೆಪಿ ಮುಖಂಡರು, ಬೆಂಕಿ ಹಚ್ಚುವ ಕೆಲಸ ಕಾಂಗ್ರೆಸ್‌ ಮಾಡುತ್ತಿದೆಯೇ
ಹೊರತು ನಾವಲ್ಲ ಎಂದು ಹೇಳಿದ್ದರು. ನಂತರ ಈ ಆರೋಪವನ್ನು ಕಾಂಗ್ರೆಸ್‌ ವಿರುದಟಛಿ ತಿರುಗಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರ± ‌³, ಆರ್‌.ಅಶೋಕ್‌ ಮತ್ತಿತರರು ಸರ್ಕಾರ ಮಂಗಳೂರು ಚಲೋಗೆ ಅಡ್ಡಿಪಡಿಸಿದಾಗ ಮೂಲಭೂತವಾದಿ ಮುಸ್ಲಿಮರನ್ನು ಬೆಂಬಲಿಸಿ ಹಿಂದೂಗಳನ್ನು ಹತ್ತಿಕ್ಕುವ ಮೂಲಕ ಕಾಂಗ್ರೆಸ್‌ ಹಿಂದೂ-ಮುಸ್ಲಿಮರ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದರು. ಲಿಂಗಾಯತ-ವೀರಶೈವ ಪ್ರತ್ಯೇಕ ಧರ್ಮ, ಕನ್ನಡಕ್ಕೆ ಪ್ರತ್ಯೇಕ ಧ್ವಜ ವಿಚಾರದಲ್ಲಿಯೂ ಸರ್ಕಾರದ ವಿರುದಟಛಿ ಬಿಜೆಪಿ ಬೆಂಕಿ ಹಚ್ಚುವ ಆರೋಪ ಮಾಡಿತ್ತು.

ಇತ್ತ ಕಾಂಗ್ರೆಸ್‌ ಕೂಡ ಆರ್‌ಎಸ್‌ಎಸ್‌, ಬಿಜೆಪಿ ಅಮಿತ್‌ ಶಾ ಅವರ ಹೆಸರು ಹೇಳಿಕೊಂಡು ಇವರೆಲ್ಲರೂ ಸೇರಿ ಹಿಂದೂ-ಮುಸ್ಲಿಮರನ್ನು ಪರಸ್ಪರ ಎತ್ತಿಕಟ್ಟುವ ಮೂಲಕ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರತ್ಯಾರೋಪ ಆರಂಭಿಸಿತ್ತು. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ಆರೋಪದ ನೇತೃತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next