ಹೊಸದಿಲ್ಲಿ: ಕರ್ನಾಟಕದ ಕಾರವಾರ ಕರಾವಳಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಏರ್ ಕ್ರಾಫ್ಟ್ ನೌಕೆ ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ. ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ನೌಕಾಪಡೆ ತಿಳಿಸಿದೆ.
ಘಟನೆಯ ಕುರಿತು ತನಿಖೆ ನಡೆಸಲು ತನಿಖಾ ಮಂಡಳಿಗೆ ಆದೇಶಿಸಲಾಗಿದೆ ಎಂದು ನೌಕಾಪಡೆ ತಿಳಿಸಿದೆ.
ಏರ್ ಕ್ರಾಫ್ಟ್ ನೌಕೆ ವಿಕ್ರಮಾದಿತ್ಯ ಜನವರಿ 2014 ರಲ್ಲಿ ರಷ್ಯಾದಿಂದ ಭಾರತಕ್ಕೆ ಬಂದಿತು. ಈಗ ಅದು ಕರ್ನಾಟಕದ ಕಾರವಾರದಲ್ಲಿದೆ. ಏರ್ ವಿಂಗ್ ಮಿಗ್ 29ಕೆ ಫೈಟರ್ ಜೆಟ್ ಗಳು ಮತ್ತು ಕಾಮೋವ್ ಹೆಲಿಕಾಪ್ಟರ್‌ಗಳನ್ನು ಒಳಗೊಂಡಿದೆ.
ಇದನ್ನೂ ಓದಿ:ಈಗ ರಿಷಿ ವರ್ಸಸ್ ಟ್ರಸ್: ಅಂತಿಮ ಹಂತದಲ್ಲಿ ಉಳಿದ ಇಬ್ಬರು ನಾಯಕರು
Related Articles
ಎಎನ್ ಎಸ್ ವಿಕ್ರಮಾದಿತ್ಯವು 284 ಮೀಟರ್ ಉದ್ದ ಮತ್ತು 60 ಮೀಟರ್ ಎತ್ತರವಿದೆ. ಇದರ ತೂಕ 40,000 ಟನ್ ವಿದ್ದು. ಇದು ಭಾರತೀಯ ನೌಕಾಪಡೆಯ ಅತಿದೊಡ್ಡ ಮತ್ತು ಭಾರವಾದ ನೌಕೆಯಾಗಿದೆ.