ಕೋಲಾರ: ತಾಲೂಕಿನ ಲಕ್ಷ್ಮೀಸಾಗರ ಕೆರೆಯಲ್ಲಿ ಕೋಲಾರ ಮತ್ತು ಹೊಸಕೋಟೆ ನಗರಸಭೆಯವರು ಕಸ ಹಾಕಿ ವಾಯು ಮಾಲಿನ್ಯ ಮಾಡುತ್ತಿದ್ದಾರೆ ಎಂದು ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಆರೋಪಿಸಿದೆ.
ತಾಲೂಕಿನ ಲಕ್ಷ್ಮೀಸಾಗರ ಅಕ್ರಮ ಕ್ವಾರೆಯನ್ನಾಗಿ ಆಯ್ಕೆ ಮಾಡಿಕೊಂಡು ಹಳ್ಳಿಗಳನ್ನು ಸರ್ವನಾಶ ಮಾಡಲು ಮುಂದಾಗಿರುವುದನ್ನು ತಪ್ಪಿಸಲು ಕ್ವಾರಿಯಿಂದ ಒಂದು ಕಿ.ಮೀ.ಅಂತರದ ಬೈಪಾಸ್ ಮುಖ್ಯರಸ್ತೆಯಲ್ಲಿಯೇಪೆಂಡಾಲ್ ಹಾಕಿ ಸಂಘದವರು ಕಾವಲು ಕಾಯುತ್ತಿದ್ದರೆ, ಇಲ್ಲಿನ ಕ್ವಾರಿಗೆ ಮಾಲಿಕರು ಎಂದು ಹೇಳಿಕೊಳ್ಳುತ್ತಿರುವ ವಕೀಲರಾದ ಚಂದ್ರಪ್ಪ, ಸೋಮಶೇಖರ್ ತಮ್ಮನಾದ ಉದಯ್ ಕುಮಾರ್ ಕ್ವಾರಿಯಲ್ಲಿರುವ ಸಾಕ್ಷಿಗಳನ್ನು ನಾಶಪಡಿಸಲು ಬೆಂಕಿ ಅಂಟಿಸಿದ್ದಾರೆ ಅವರ ವಿರುದ್ಧ ಕ್ರಮಕೈಗೊಳ್ಳಲು ರೈತ ಸಂಘದ ರಾಜ್ಯಾಧ್ಯಕ್ಷ ಬಿ.ನಾರಾಯಣಸ್ವಾಮಿ ಒತ್ತಾಯಿಸಿದರು.
ಇದನ್ನೂ ಓದಿ;- ಸಿಡಿಲು ಬಡಿದು ಇಬ್ಬರು ಕೃಷಿ ಕಾರ್ಮಿಕರ ಸಾವು
ಬೆಂಕಿ ಉರಿಯುತ್ತಿದ್ದನ್ನು ಕಂಡ ರೈತ ಮುಖಂಡರು, ಸ್ಥಳದಲ್ಲಿಯೇ ಇದ್ದ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ, ಸಾಕ್ಷಿ ಕಾಪಾಡಿದ ಅಗ್ನಿಶಾಮಕ ದಳಕ್ಕೆ ರೈತ ಸಂಘ ಧನ್ಯವಾದ ತಿಳಿಸಿತು. ಸ್ಥಳಕ್ಕೆ ವೇಮಗಲ್ ಇನ್ಸ್‌ಪೆಕ್ಟರ್ ಶಿವರಾಜ್ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲಾ ಗೌರವಾಧ್ಯಕ್ಷ ಕೂಲದೇವಿ ಗೋಪಾಲಕೃಷ್ಣ, ಜಿಲ್ಲಾಧ್ಯಕ್ಷ ಕೊತ್ತಮಿರಿ ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ, ಯುವ ಘಟಕದ ರಾಜ್ಯಾಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ, ಜಗನ್ನಾಥ್‌ರೆಡ್ಡಿ, ಎಲ್.ಎನ್.ಬಾಬು, ದೊಡ್ಡ ಕುರುಬರಹಳ್ಳಿ ಶಂಕರಪ್ಪ, ಧನರಾಜ್, ವೈ.ಆರ್.ಚಂದ್ರಪ್ಪ, ಮುಳಬಾಗಿಲು ರಾಮು, ಯಶ್ವಂತ್ ಉಪಸ್ಥಿತರಿದ್ದರು.