Advertisement

ಕಾರವಾರ: ಬಂದರಿನಲ್ಲಿ ಇರಿಸಲಾಗಿದ್ದ ಮಲ್ಪೆಯ ಬೋಟ್ ಗೆ ಮತ್ತೆ ಹತ್ತಿಕೊಂಡ ಬೆಂಕಿ

06:05 PM Nov 06, 2021 | Team Udayavani |

ಕಾರವಾರ:  ಮಲ್ಪೆ ಬೋಟ್ ಗೆ ಬಂದರಿನಲ್ಲಿ ಮತ್ತೆ ಬೆಂಕಿ ಹೊತ್ತಿದ ಘಟನೆ ಇಂದು ಸಂಜೆ ನಡೆದಿದೆ.

Advertisement

ಕಾರವಾರದ ಲೈಟ್ ಹೌಸ್ ಬಳಿ ಮೀನು ಹಿಡಿಯಲು ಹೋಗಿದ್ದ ವೇಳೆ ಬೋಟ್ ಗೆ ಬೆಂಕಿ ಹೊತ್ತಿಕೊಂಡು ಏಳು ಜನ ಮೀನುಗಾರರನ್ನ ರಕ್ಷಣೆ ಮಾಡಲಾಗಿತ್ತು.  ಬೋಟ್ ಗೆ ಹೊತ್ತಿಕೊಂಡ ಬೆಂಕಿಯನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ  ನಂದಿಸಿ ಕಾರವಾರದ ಬೈತಖೋಲ್ ಸಮೀಪದ ವಾಣಿಜ್ಯ  ಬಂದರಿಗೆ ತಂದು ಇಡಲಾಗಿತ್ತು.

ಆದರೆ ಇಂದು ಸಂಜೆ ಹೊತ್ತಿಗೆ ಅದೆ ಬೋಟ್ ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಬೋಟ್ ಸಂಪೂರ್ಣ ಕರಕಲಾಗಿದೆ. ನಿನ್ನೆ ರಾತ್ರಿ ಬೋಟ್ ಗೆ ಹೊತ್ತಿಕೊಂಡ ಬೆಂಕಿ ನಂದಿಸಲಾಗಿತ್ತಾದ್ದರೂ ಬೆಂಕಿ ನಂದಿಸಿದ ಬೋಟ್ ಒಳಭಾಗದಲ್ಲಿ ಸಣ್ಣದೊಂದು ಬೆಂಕಿ ಕಿಡಿ ಇದ್ದ ಕಾರಣ ಭಾರೀ ಗಾಳಿಯಿಂದಾಗಿ ವಾಪಸ್ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಕರಾವಳಿ ಭದ್ರತಾ ಪಡೆಯ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next