Advertisement

ಓಡಿಲ್ನಾಳ: ಒಲೆಯ ಬೆಂಕಿಗೆ ಮನೆ ಭಸ್ಮ

06:00 AM Jun 10, 2018 | |

ಬೆಳ್ತಂಗಡಿ: ಅಡುಗೆ ಮನೆಯ ಒಲೆಯಿಂದ ಹಾರಿದ ಬೆಂಕಿಗೆ ಗುಡಿಸಲು ಭಸ್ಮವಾದ ಘಟನೆ ಶುಕ್ರವಾರ ತಡರಾತ್ರಿ ಗುರುವಾಯನಕೆರೆ ಸಮೀಪದ  ಓಡಿಲ್ನಾಳ ಗ್ರಾಮದ ಅಮರ್ಜಾಲಿನಲ್ಲಿ  ಸಂಭವಿಸಿದೆ. ಅದು ಗೋಡೆಯಿಲ್ಲದ, ಟರ್ಪಾಲ್‌ನಲ್ಲಿ ನಿರ್ಮಿಸಿದ್ದ ಗುಡಿಸಲಿನಂಥ ಮನೆಯಾಗಿದ್ದು, ಸಿಮೆಂಟ್‌ ಶೀಟ್‌ ಛಾವಣಿ ಹಾಕಲಾಗಿತ್ತು. ಮನೆಗೆ ವಿದ್ಯುತ್‌ ಸಂಪರ್ಕವೂ ಇರಲಿಲ್ಲ. 

Advertisement

ಮನೆಯಲ್ಲಿ ಶ್ರೀಧರ ಆಚಾರ್ಯ ಹಾಗೂ  ಅವರ ಪತ್ನಿ ಸುಮತಿ  ವಾಸವಾಗಿದ್ದರು. ಸುಮತಿ  ಮೊಬೈಲ್‌ ಚಾರ್ಜ್‌ ಮಾಡಲು ಪಕ್ಕದ ಮನೆಗೆ ತೆರಳಿದ್ದರು. ಅಲ್ಲಅ ಮಾತನಾಡುತ್ತೂ ಕೂತಿದ್ದ ಅವರನ್ನು ಹುಡುಕಿಕೊಂಡು ಗಂಡನೂ ಅಲ್ಲಿಗೆ ತೆರಳಿದ್ದರು. ಈ ವೇಳೆ ಅಗ್ನಿ ಅವಘಡ ಸಂಭವಿಸಿದ್ದರಿಂದ   ಪ್ರಾಣಾಪಾಯ ಸಂಭವಿಸಿಲ್ಲ.  

ಸಾಲ ಪಡೆದಿದ್ದ ಹಣ ಭಸ್ಮ 
ಮನೆಯಲ್ಲಿದ್ದ ವಸ್ತುಗಳು ಹಾಗೂ ಶುಕ್ರವಾರ ಸ್ವ ಸಹಾಯ ಸಂಘದಿಂದ ಸಾಲ ಪಡೆದಿದ್ದ 45 ಸಾ.ರೂ.  ಮತ್ತು ಬ್ಯಾಂಕಿನಿಂದ ಪಡೆದಿದ್ದ 10 ಸಾ.ರೂ. ಸೇರಿ ಒಟ್ಟು 55 ಸಾ.ರೂ. ಭಸ್ಮವಾಗಿದೆ ಎಂದು ಮನೆಯವರು ತಿಳಿಸಿದ್ದಾರೆ. ಮನೆ ಪೂರ್ತಿ ಟರ್ಪಾಲು ಮೊದಲಾದ ವಸ್ತು ಗಳಿಂದ ಮಾಡಿ ದ್ದರಿಂದ ಬೆಂಕಿ ಯನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ ಮನೆಯ ದಾಖಲೆ ಪತ್ರಗಳೂ ನಾಶ ವಾಗಿವೆ ಎನ್ನಲಾಗಿದೆ. 

ಸ್ಥಳಕ್ಕೆ ಓಡಿಲ್ನಾಳ ಗ್ರಾಮ ಪಂ. ಅಧ್ಯಕ್ಷ ಅಶೋಕ್‌ ಕೋಟ್ಯಾನ್‌, ಕಂದಾಯ ಅಧಿಕಾರಿಗಳು ಭೇಟಿ ನೀಡಿದ್ದು, ವರದಿ ಸಲ್ಲಿಸಿ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. ಸಾಲದ ಮೊತ್ತವೂ ಸೇರಿ ಸುಮಾರು 1 ಲ. ರೂ.ಗೂ ಅಧಿಕ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. 
ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ. 

ಸುದ್ದಿ ತಿಳಿದ ತತ್‌ಕ್ಷಣ ಸ್ಥಳಕ್ಕೆ ಬೆಳ್ತಂಗಡಿಯ ಜಲೀಲ್‌, ಹಂಸ, ರಫೀಕ್‌, ಅಪ್ಪಿ, ಇಕ್ಬಾಲ್‌, ಸಲೀಂ, ಮಹೇಶ್‌  ಜೈನ್‌, ಅರುಣ್‌, ದೇವಿದಾಸ್‌, ನಿತೇಶ್‌ ಮೊದಲಾದವರು ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳದ ಸಿಬಂದಿ ಸಹಾಯದಿಂದ ಬೆಂಕಿ ನಂದಿಸುವ ಕಾರ್ಯಕ್ಕೆ ಸಹಕರಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next