Advertisement

ವಿಜಯಪುರ: ಹಿರೋ ಬೈಕ್ ಶೋರೂಂಗೆ ಬೆಂಕಿ

12:05 AM Aug 27, 2019 | sudhir |

ವಿಜಯಪುರ : ಹಿರೋ ಶೋರೂಂನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಸೋಮವಾರ ರಾತ್ರಿ 10 30. ರ ಸುಮಾರಿಗೆ ನಗರದ ಸೋಲಾಪುರ ರಸ್ತೆಯಲ್ಲಿರುವ ಶೋರೂಂನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ‌ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಬೆಂಕಿ ಅವಘಡದಲ್ಲಿ ಅಪಾರ ಮೌಲ್ಯದ‌ ಬೈಕ್ ಗಳು ಹಾಗೂ ವಸ್ತುಗಳು ಭಸ್ಮವಾಗಿವೆ.

Advertisement

ತೋಸ್ನಿವಾಲ್ ಎಂಬುವವರಿಗೆ ಸೇರಿದ ಶೋಂ ರೂಂನಲ್ಲಿ ಸಂಭವಿಸಿದ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ‌ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರ್ಶ ನಗರ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಜರುಗಿರುವ ಘಟನೆ ಕುರಿತು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next