Advertisement

GIMS ಹಾಸ್ಟೆಲ್‌ನಲ್ಲಿ ಅಗ್ನಿ ಅವಘಡ; ತಪ್ಪಿದ ಅನಾಹುತ

10:22 PM Feb 16, 2024 | Team Udayavani |

ಗದಗ: ಇಲ್ಲಿನ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿರುವ ಎಂಬಿಬಿಎಸ್‌ ವಿದ್ಯಾರ್ಥಿಗಳ ಹಾಸ್ಟೆಲ್‌ನ ಕೆಳಮಹಡಿಯಲ್ಲಿ ಪೇರಿಸಿಟ್ಟಿದ್ದ ಕಟ್ಟಿಗೆಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಮರದ ತುಂಡುಗಳು ಹೊತ್ತಿ ಉರಿದಿವೆ. ಬೆಂಕಿಯ ಕೆನ್ನಾಲಿಗೆ ಮೊದಲ ಮಹಡಿಗೂ ವಿಸ್ತರಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಚುರುಕಿನ ಕಾರ್ಯಾಚರಣೆ ನಡೆಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

Advertisement

‘ಹಾಸ್ಟೆಲ್‌ನ ಪಾರ್ಕಿಂಗ್‌ ಪ್ರದೇಶದಲ್ಲಿರುವ ವಿದ್ಯುತ್‌ ಕೊಠಡಿ ಪಕ್ಕದಲ್ಲಿ ಕಟ್ಟಿಗೆ ತುಂಡುಗಳನ್ನು ಜೋಡಿಸಿಡಲಾಗಿತ್ತು. ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಿಗೆಗಳು ಚೆನ್ನಾಗಿ ಒಣಗಿದ್ದರಿಂದ ಬೆಂಕಿ ಬೇಗ ಹರಡಿಕೊಂಡಿದೆ. ಮೊದಲ ಮಹಡಿಗೂ ಬೆಂಕಿಯ ರಾವು ಆವರಿಸಿಕೊಂಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿ.ಎಸ್‌.ಟಕ್ಕೇಕರ್‌ ಅವರ ಮಾರ್ಗದರ್ಶನದಲ್ಲಿ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿದರು. ಘಟನೆಯಲ್ಲಿ ಯಾರಿಗೂ ತೊಂದರೆ ಆಗಿಲ್ಲ’ ಎಂದು ಗದಗ ಅಗ್ನಿಶಾಮಕ ಠಾಣೆಯ ಹವಾಲ್ದಾರ್‌ ಮುತ್ತಪ್ಪ ತಿಳಿಸಿದ್ದಾರೆ.

ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಸಿಬ್ಬಂದಿಯಾದ ಎಂ.ಐ.ದೊಡ್ಡಮನಿ, ನಜೀರ್‌ ಅಹ್ಮದ್‌ ಜಮಖಂಡಿ, ಕೆ.ಎಂ.ಹುಯಿಲಗೋಳ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next