Advertisement

ಅಗ್ನಿ ಅವಘಡದಿಂದ ಹೊತ್ತಿ ಉರಿದ ರೆಸಾರ್ಟ್; ಅಪಾರ ಹಾನಿ

12:14 PM Jul 18, 2021 | Team Udayavani |

ಗಂಗಾವತಿ: ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ತಾಲ್ಲೂಕಿನ ಅಂಜಿನಳ್ಳಿಯ ಹತ್ತಿರವಿರುವ ರೆಸಾರ್ಟ್ ಹೊತ್ತಿ ಉರಿದು ಅಪಾರ ಹಾನಿ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಆದ ಬಗ್ಗೆ ವರದಿಯಾಗಿಲ್ಲ.

Advertisement

ರೆಸಾರ್ಟಿನ ಅಡುಗೆ ಮನೆಯಲ್ಲಿ ಆಹಾರ ಬೇಯಿಸುವ ಸಂದರ್ಭದಲ್ಲಿ ಬೆಂಕಿ ಅವಘಡ ನಡೆದಿದೆ. ಇದರಿಂದಾಗಿ ರೆಸಾರ್ಟ್ ನ ಅಡುಗೆಮನೆ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಅದೃಷ್ಟವಶಾತ್ ಅಡುಗೆ ಸಿಲಿಂಡರನ್ನು ರೆಸಾರ್ಟ್ ನ ಹೊರಗೆ ಇರಿಸಲಾಗಿತ್ತು ಇದರಿಂದಾಗಿ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಇದನ್ನೂ ಓದಿ:ಗಂಗಾವತಿ: ಸೂಪರ್ ಮಾರ್ಕೆಟ್ ನ ಬಾಗಿಲು ಮುರಿದು ಲಕ್ಷಾಂತರ ರೂ. ಕಳವು

ಆನೆಗೊಂದಿ ಗ್ರಾಮದ ಹನಮಂತ ತಳವಾರ ಎಂಬುವರಿಗೆ ಸೇರಿದ ಈ ರೆಸಾರ್ಟ್ ಕಳೆದ 3 ವರ್ಷಗಳ ಹಿಂದೆ ಇಲ್ಲಿ ಆರಂಭಿಸಲಾಗಿದೆ. ವೀಕೆಂಡ್ ಇರುವುದರಿಂದ ಬೆಂಗಳೂರು ಹುಬ್ಬಳ್ಳಿ ಇತರೆ ಭಾಗಗಳಿಂದ ಶುಕ್ರವಾರ ಪ್ರವಾಸಿಗರು ಅಂಜನಾದ್ರಿ ಕಿಷ್ಕಿಂದ ಪರ್ವತ, ಪಂಪಾ ಸರೋವರ ಸೇರಿದಂತೆ ಸುತ್ತಲಿನ ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡಲು ಇಲ್ಲಿಗೆ ಆಗಮಿಸಿ ಸುತ್ತಲಿನಲ್ಲಿರುವ ರೆಸಾರ್ಟ್ ಗಳಲ್ಲಿ ತಂಗುತ್ತಾರೆ. ಬೆಂಕಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ರೆಸಾರ್ಟ್ ನಲ್ಲಿ ಪ್ರವಾಸಿಗರು ಇರಲಿಲ್ಲ ಎನ್ನಲಾಗುತ್ತಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸ್ ಇಲಾಖೆಯವರು ಮತ್ತು ಸುತ್ತಲಿನ ಗ್ರಾಮಗಳ ಗ್ರಾಮಸ್ಥರು ತೆರಳಿ ಬೆಂಕಿ ನಂದಿಸುವಲ್ಲಿ ನೆರವಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next