ಬೆಂಗಳೂರು: ಐಟಿ-ಬಿಟಿ ಇಲಾಖೆ ಅಧೀನದಲ್ಲಿರುವ ಬೆಂಗಳೂರು ಬಯೋ ಇನೋವೇಷನ್ ಸೆಂಟರ್(ಬಿಬಿಸಿ)ನಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಕೋಟ್ಯಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿ ಯಾಗಿರುವ ಘಟನೆ ಮಂಗಳವಾರ ನಡೆದಿದೆ. ನವೋದ್ಯಮಕ್ಕೆ ಸಂಬಂ ಸಿದ ಪ್ರಯೋಗಾಲಯದಲ್ಲಿ 80 ರಿಂದ 110 ಕೋಟಿ ರೂ. ಹಾಗೂ ಬಿಬಿಸಿಗೆ ಸಂಬಂ ಸಿದಂತೆ 42 ಕೋಟಿ ರೂ. ಸೇರಿದಂತೆ 152 ಕೋಟಿ ರೂ. ನಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.
ಎಲೆಕ್ಟ್ರಾನಿಕ್ ಸಿಟಿಯ ಬಿಎಚ್‌ಇಎಲ್ ಜಂಕ್ಷನ್ ಸಮೀಪದ ಬಿಬಿಸಿಯಲ್ಲಿ ಮಂಗಳವಾರ ಮುಂಜಾನೆ ಸುಮಾರು 5 ಗಂಟೆ ಸುಮಾರಿಗೆ ದುರ್ಘಟನೆ ನಡೆದಿದೆ. ಅಗ್ನಿ ಅವಘಡದ ವೇಳೆ ಸೆಂಟರ್‌ನಲ್ಲಿ ಯಾರು ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದರಿಂದ ಭಾರೀ ಅನಾಹುತ ತಪ್ಪಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ನೆಲಮಹಡಿ ಸೇರಿ ನಾಲ್ಕು ಅಂತಸ್ತಿನ ಕಟ್ಟಡದ 2ನೇ ಮಹಡಿಯಲ್ಲಿ ಬಿಬಿಸಿ ಕಾರ್ಯ ನಿರ್ವಹಿಸುತ್ತಿದೆ. ಮುಂಜಾನೆ ಸುಮಾರು 5 ಗಂಟೆಗೆ ಸೆಂಟರ್‌ನ ಪ್ರಯೋಗಾಲಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದನ್ನು ಗಮನಿಸಿದ ಸೆಕ್ಯುರಿಟಿ ಗಾರ್ಡ್‌ಗಳು ಅಗ್ನಿಶಾ ಮಕ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ.
ಈ ಬಿಬಿಸಿಯ ಸೆಂಟರ್‌ನಲ್ಲಿ ಸುಮಾರು 12ಕ್ಕೂ ಹೆಚ್ಚು ಸಂಶೋಧನಾ ಪ್ರಯೋಗಾಲಯಗಳಿದ್ದು, ಈ ಪ್ರಯೋಗಾಲಯಗಳಲ್ಲಿ ಜೀವ ವಿಜ್ಞಾನ, ಆರೋಗ್ಯ, ಔಷಧ, ಜೈವಿಕ ಔಷಧ, ಕೃಷಿ, ಆಹಾರ, ಕೈಗಾರಿಕಾ ಜೈವಿಕ ತಂತ್ರಜ್ಞಾನ, ಜೈವಿಕ ಪರಿಸರ ತಂತ್ರಜ್ಞಾನ ಸೇರಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಸಂಶೋಧನೆಗಳು ನಡೆಯು ತ್ತವೆ. ಹೀಗಾಗಿ ಪ್ರಯೋಗಾಲಯಗಳಲ್ಲಿ ವಿವಿಧ ರಾಸಾಯನಿಕ ದ್ರಾವಣ, ವಸ್ತುಗಳು, ಉಪಕರಣಗಳು, ಮಾದರಿಗಳು ಹೆಚ್ಚಿನ ಪ್ರಮಾಣದಲ್ಲಿ ಇದ್ದವು. ಬೆಂಕಿ ಅವಘಡದ ವೇಳೆ ಸಮಯ ಕಳೆದಂತೆ ಕಟ್ಟಡದಲ್ಲಿ ಬೆಂಕಿಯ ಪ್ರಮಾಣ ಹೆಚ್ಚಾಗಿದೆ. ಆರಂಭದಲ್ಲಿ ಬೆಂಕಿ ತಹ ಬದಿಗೆ ತರುವುದು ಕಷ್ಟವಾದ ಹಿನ್ನೆಲೆಯಲ್ಲಿ ಹೆಚ್ಚುವರಿ ಯಾಗಿ ಮೂರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕರೆ ಸಿಕೊಂಡು ಸತತ ನಾಲ್ಕು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ರಾಸಾಯನಿಕ ವಸ್ತುಗಳು ಹೆಚ್ಚಿದ್ದರಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಯಿದೆ. ಸ್ಪಷ್ಟತೆ ಇಲ್ಲ ಎಂದು ಅಗ್ನಿಶಾಮಕ ದಳ ಅಧಿಕಾರಿಗಳು ಮಾಹಿತಿ ನೀಡಿದರು. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಿಯಾಂಕ್ ಖರ್ಗೆ ಭೇಟಿ ಪರಿಶೀಲನೆ: ಅಗ್ನಿ ಅವಘಡ ಸಂಭವಿಸಿದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಬಯೋ ಇನ್ನೋವೇಶನ್ ಸೆಂಟರ್‌ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಧಿಕಾರಿಗಳ ಜತೆ ಕೆಲ ಹೊತ್ತು ಚರ್ಚಿಸಿ ಘಟನೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.
ದಹಿಸುವ ರಾಸಾಯನಿಕ ಸಂಗ್ರಹದಿಂದ ಅವಘಡ?
ಬೆಂಗಳೂರು: ಬೆಂಗಳೂರು ಬಯೋ ಇನೋವೇಶನ್ ಸೆಂಟರ್‌ನಲ್ಲಿ (ಬಿಬಿಸಿ) ಎರಡನೇ ಮಹಡಿಯ ಗ್ಯಾಲೋರ್ ಟಿಎಕ್ಸ್‌ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತ್ತು. ಬಯೋ ಇನೋವೇಶನ್ ಸೆಂಟರ್‌ನಲ್ಲಿ (ಬಿಬಿಸಿ) ಸ್ಟಾರ್ಟ್ ಅಪ್‌ಗ್ಳಿಗೆ ತಮ್ಮ ಪ್ರಯೋಗಾಲಯದಲ್ಲಿ ಯಾವುದೇ ದೊಡ್ಡ ಪ್ರಮಾಣದ ದಹಿಸುವ ರಾಸಾಯನಿಕಗಳನ್ನು ಸಂಗ್ರಹಿಸದಂತೆ ಮತ್ತು ಬಳಸದಂತೆ ಈ ಹಿಂದೆ ತಿಳಿಸಲಾಗಿತ್ತು. ತೆರೆದ ಸ್ಥಳದಲ್ಲಿ ಇಡುವಂತೆ ಸೂಚಿಸಲಾಗಿತ್ತು. ಆದರೂ ಶೇಖರಣೆ ಮಾಡಿದ್ದರಿಂದ ಬೆಂಕಿ ಅವಘಡ ಸಂಭವಿಸಿದೆ. 2ನೇ ಮಹಡಿಯಲ್ಲಿ ಹೆಚ್ಚು ಸ್ಟಾರ್ಟ್ ಅಪ್‌ಗ್ಳನ್ನು ಇರಿಸಲು ನವೀಕರಿಸಲಾಗಿದೆ. ಪರಸ್ಪರ ಸಂಪರ್ಕ ಹೊಂದಿದ್ದ ಎಚ್‌ವಿಎಸಿ ಲೈನ್‌ನಿಂದಾಗಿ ಮೊದಲ ಮತ್ತು ನೆಲ ಮಹಡಿಗಳಿಗೆ ವ್ಯಾಪಕ ಹಾನಿ ಸಂಭವಿಸಿದಾಗ 2ನೇ ಮಹಡಿಯು ಸಂಪೂರ್ಣವಾಗಿ ನಾಶವಾಯಿತು.