Advertisement
ತಾಲೂಕಿನ ಬಿಳಿಕೆರೆ ಹೋಬಳಿಯ ತೆಂಕನಕೊಪ್ಪಲಿನ ಶ್ರೀನಿವಾಸೇ ಗೌಡರ ಕಾಯರ್ ಫ್ಯಾಕ್ಟರಿಯಲ್ಲಿ ಶನಿವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದೆ.
Related Articles
Advertisement
ಅಷ್ಟರಲ್ಲಾಗಲೇ ಸುತ್ತಮುತ್ತಲಿನಲ್ಲಿ ಭಾರೀ ಪ್ರಮಾಣದ ದಟ್ಟ ಹೊಗೆ ಕಾಣಿಸಿಕೊಂಡಿರುವುದರೊಂದಿಗೆ ಬೆಂಕಿ ಆವರಿಸಿದ್ದರಿಂದ ಪಕ್ಕದ ಕೆರೆಯಿಂದ ವಾಹನಗಳ ಮೂಲಕ ಸುಮಾರು 600 ಕ್ಕೂ ಹೆಚ್ಚು ಟ್ಯಾಂಕ್ ನೀರು ಹಾಯಿಸಿ ಬೆಂಕಿಯನ್ನು ತಹ ಬದಿಗೆ ತಂದರೂ ತಡರಾತ್ರಿಯಾಗಿದ್ದರಿಂದ ಗಾಳಿ ಬೀಸಿದ್ದರಿಂದ ಒಂದು ಕಡೆ ಆರಿಸುತ್ತಿದ್ದಂತೆ ಮತ್ತೊಂದು ಕಡೆಯಿಂದ ಬೆಂಕಿ ಕಾಣಿಸಿಕೊಳ್ಳಲಾರಂಬಿಸಿತು. ಬೆಳಗಿನವರೆಗೂ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳು ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದರು.
ಸುಮಾರು 3 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದ್ದು, ಘಟನೆ ಕುರಿತು ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಬ್ಬಂದಿಗಳ ಕಾರ್ಯಕ್ಕೆ ಶ್ಲಾಘನೆ:
ಸಂಜೆಯಿಂದ ರಾತ್ರಿ ಊಟ, ನಿದ್ರೆಯನ್ನೇ ಮರೆತು ರಾತ್ರಿಯಿಡಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳ ಕಾರ್ಯಕ್ಕೆ ಗ್ರಾಮಸ್ಥರು ಶ್ಲಾಘಿಸಿದ್ದಾರೆ.