Advertisement

ಬೆಂಕಿ ತಗುಲಿ ರಾಗಿ ಬಣವೆ ಭಸ್ಮ: ರೈತನಿಗೆ ನಷ್ಟ

03:36 PM Mar 07, 2021 | Team Udayavani |

ಚನ್ನಪಟ್ಟಣ: ಆಕಸ್ಮಿಕ ಬೆಂಕಿ ತಗುಲಿ ರಾಗಿ ಬಣವೆ ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕರಿಗೌಡ ಎಂಬುವರಿಗೆ ಸೇರಿದ ರಾಗಿ ಬಣವೆ ಬೆಂಕಿಯ ಕೆನ್ನಾಲಿಗೆ ಬೂದಿಯಾಗಿದ್ದು, ಸಾವಿರಾರು ರೂ. ಮೌಲ್ಯದ ರಾಗಿ ಹುಲ್ಲು ನಷ್ಟವಾಗಿದೆ.

Advertisement

ಹೈನುಗಾರಿಕಯನ್ನೇ ಅವಲಂಬಿಸಿ ಬದುಕು ನಡೆಸುತ್ತಿರುವ ಅವರು, ಆರು ಸೀಮೆ ರಾಸು ಸಾಕಿಕೊಂಡಿದ್ದರು. ರಾಸುಗಳ ನಿರ್ವಹಣೆಗಾಗಿ, ಸ್ಥಳೀಯವಾಗಿ ರಾಗಿ ಒಕ್ಕಣೆಗಾರರಿಂದ ರಾಗಿ ಹುಲ್ಲನ್ನು ಖರೀದಿ ಮಾಡಿ, ತಮ್ಮ ಮನೆಯ ಪಕ್ಕದಲ್ಲಿ ಬಣವೆ ಹಾಕಿಕೊಂಡಿದ್ದರು.

ಶನಿವಾರ ಮಧ್ಯಾಹ್ನ 2ಗಂಟೆ ಹೊತ್ತಿಗೆ ಆಕಸ್ಮಿಕವಾಗಿ ಮೆದೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕುರಿಗಾಹಿಗಳು ಮಾಹಿತಿ ನೀಡಿದ್ದಾರೆ. ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ, ಸ್ಥಳಿಯರು ಬೆಂಕಿಯನ್ನು ನಂದಿಸಲು ಪ್ರಯತ್ನಪಟ್ಟರು ವಿಫಲವಾಗಿದೆ. ಅಗ್ನಿ ಶಾಮಕದಳ ಆಗಮಿಸುವುದರೊಳಗೆ ಬೆಂಕಿ ಸಂಪೂರ್ಣವಾಗಿ ರಾಗಿಮೆದೆಯನ್ನು ಸುತ್ತುವರಿದು ಧಗಧಹಿಸಿದೆ. ಇತ್ತೀಚಿನ ದಿನಗಳಲ್ಲಿ ರಾಗಿ ಹುಲ್ಲಿನ ಬೆಲೆ ಹೆಚ್ಚಳವಿರುವುದರಿಂದ, ಹಲವಾರು ಕಡೆ ಹುಡುಕಾಡಿ, ರಾಗಿಹುಲ್ಲನ್ನು ಶೇಖರಣೆ ಮಾಡಿ ಮೆದೆ ಹಾಕಿದ್ದರು. ದುರದೃಷ್ಟವೆಂಬಂತೆ ಬೆಂಕಿ ರಾಗಿ ಮೆದೆಯನ್ನು ಭಸ್ಮ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next