Advertisement
ಮಂಗಳೂರಿನ ಬೈಕಂಪಾಡಿ ಎಂಆರ್ ಪಿಎಲ್ ನಿಂದ ಕೊಯಮತ್ತೂರಿಗೆ ಅನಿಲ ಸಾಗಾಟ ನಡೆಸುತ್ತಿದ್ದ ಟ್ಯಾಂಕರ್ ನಲ್ಲಿ ಇಂಜಿನ್ ಗೆ ತಲಪಾಡಿ ಕೆ.ಸಿ.ರೋಡ್ ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಟ್ಯಾಂಕರ್ ಚಾಲಕ ಕೃಷ್ಣರಾಜ್ ತಕ್ಷಣ ಟ್ಯಾಂಕರ್ ನಿಲ್ಲಿಸಿದ್ದ, ನಂತರ ಅಗ್ನಿ ಶಾಮಕ ದಳ ಹಾಗು ಸ್ಥಳೀಯರು ಸೇರಿ ಬೆಂಕಿ ನಂದಿಸಿದ್ದಾರೆ. ಈ ಮೂಲಕ ಆಗಬಹುದಾದ ದೊಡ್ಡ ಅನಾಹುತ ತಪ್ಪಿದೆ. ಗ್ಯಾಸ್ ಸೋರಿಕೆಯಿಂದ ಬೆಂಕಿ ಎಂದು ಗಾಬರಿಗೊಂಡ ವಾಹನ ಸವಾರರು, ಸ್ಥಳೀಯರಲ್ಲಿ ಆತಂಕದಿಂದ ರಸ್ತೆ ಪಥ ಬದಲಿಸಿದರು . ಸ್ಟಳಕ್ಕೆ ಆಗಮಿಸಿದ ಉಳ್ಳಾಲ ಪೊಲೀಸರು, ಯಾವುದೇ ಆತಂಕವಿಲ್ಲದೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಚಲಿಸಲು ಜನರಿಗೆ ಸೂಚಿಸಿದರು.