Advertisement

ಪ್ಯಾಸೆಂಜರ್‌ ರೈಲು ಎಂಜಿನ್‌ನಲ್ಲಿ ಬೆಂಕಿ

12:05 AM Apr 28, 2019 | Lakshmi GovindaRaj |

ಮಹದೇವಪುರ: ಬಂಗಾರಪೇಟೆಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಡೆಮು ರೈಲಿನ ಎಂಜಿನ್‌ನಲ್ಲಿ ಶನಿವಾರ ಸಂಜೆ ಬೆಂಕಿ ಕಾಣಿಸಿಕೊಂಡ ಪರಿಣಾಮ, ಪ್ರಯಾಣಿಕರು ಕೆಲ ಕಾಲ ಆತಂಕಕ್ಕೀಡಾದ ಘಟನೆ ಹೂಡಿ ಬಳಿ ನಡೆದಿದೆ.

Advertisement

ಆದರೆ, ಲೋಕೋ ಪೈಲಟ್‌ (ರೈಲು ಚಾಲಕ) ಸಮಯ ಪ್ರಜ್ಞೆಯಿಂದಾಗಿ ಭಾರೀ ಅಗ್ನಿ ದುರಂತ ತಪ್ಪಿದೆ. ಶನಿವಾರ ಸಂಜೆ 5.30ರ ಸುಮಾರಿಗೆ ಬಂಗಾರಪೇಟೆ ಕಡೆಯಿಂದ ಬೆಂಗಳೂರಿಗೆ ಹೊರಟಿದ್ದ ಡೆಮು ರೈಲು ಹೂಡಿ ಸಮೀಪ ಬರುತ್ತಿದ್ದಂತೆ ಎಂಜಿನ್‌ನಲ್ಲಿ ಶಾರ್ಟ್‌ ಸರ್ಕಿಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಕೆಲಕಾಲ ಆತಂಕದ ವಾತವರಣ ನಿರ್ಮಾಣವಾಗಿತ್ತು.

ಎಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ, ಹಿಂದಿನ ಬೊಗಿಗಳಿಗೂ ಅವರಿಸಿಕೊಳ್ಳುವುದರಲ್ಲಿತ್ತು. ತಕ್ಷಣ ಎಚ್ಚೇತ್ತುಕೊಂಡ ಲೋಕೋ ಪೈಲಟ್‌, ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಅಗಮಿಸಿದ ಮಹದೇವಪುರದ ಅಗ್ನಿಶಾಮಕ ಠಾಣೆಯ 15ಕ್ಕೂ ಹೆಚ್ಚು ಸಿಬ್ಬಂದಿ, ಬೆಂಕಿ ನಂದಿಸಿ ಅನಾಹುತ ತಪ್ಪಿಸಿದ್ದಾರೆ.

ಘಟನೆಯಲ್ಲಿ ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ರೈಲು ಎಂಜಿನ್‌ನ ಬ್ಯಾಟರಿಗೆ ಅಳವಡಿಸಿದ್ದ ತಂತಿಗಳು ಶಾರ್ಟ್‌ ಆದ ಕಾರಣ ಅವಘಡ ಸಂಭವಿಸಿರಬಹುದು ಎಂದು ಅಗ್ನಿಶಾಮಕ ಸಿಬ್ಬಂದಿ ಶಂಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next