Advertisement
ರಾಮದುರ್ಗ ಪಟ್ಟಣದ ಸಿದ್ದಪ್ಪ ಮುಳ್ಳೂರ ಎಂಬುವರ ಒಡೆತನದ ಸಿದ್ದೇಶ್ವರ ಆಯಿಲ್ ಇಂಡಸ್ಟ್ರೀಸ್‍ನ ಮುಳ್ಳೂರ ಆಯಿಲ್ ಮಿಲ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದ ಬೆಂಕಿ ತಗುಲಿ ಶೆಂಗಾ, ಏಣ್ಣೆ, ಹಾಗೂ ಮಿಲ್ಲಿನ ಅನೇಕ ವಸ್ತುಗಳು ಸೇರಿ ಅಂದಾಜು 18 ರಿಂದ 20 ಲಕ್ಷ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ.
Related Articles
Advertisement
ಬೆಂಕಿ ತಗಲಿರುವ ಸುದ್ದಿ ತಿಳಿದು ದೌಡಾಯಿಸಿದ ಮಾಲೀಕರು ಅಗ್ನಿ ಶಾಮಕದಳ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ಇಡೀ ಆಯಿಲ್ ಮಿಲ್ ತುಂಬಾ ಬೆಂಕಿ ಆವರಿಸಿ ಎಲ್ಲ ವಸ್ತುಗಳು ಸುಟ್ಟು ಕರಕಲಾಗಿವೆ. ಆದರೂ ಸಾಕಷ್ಟು ಹರಸಾಹಸ ಪಟ್ಟು ಬೆಂಕಿ ನಂದಿಸಿದರು.
ಘಟನಾ ಸ್ಥಳಕ್ಕೆ ರಾಮದುರ್ಗ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ರಾಮದುರ್ಗ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.