Advertisement

ಎರಡು ನೌಕೆಗಳಿಗೆ ಬೆಂಕಿ: ಭಾರತೀಯರು ಸೇರಿ 14 ಮಂದಿ ಸಜೀವ ದಹನ

12:30 AM Jan 23, 2019 | |

ಮಾಸ್ಕೋ: ರಷ್ಯಾ ಮತ್ತು ಕ್ರಿಮಿಯಾವನ್ನು ಬೇರ್ಪಡಿಸುವಂಥ ಕೆರ್ಚ್‌ ಜಲಸಂಧಿಯಲ್ಲಿ ಎರಡು ನೌಕೆಗಳಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ, ಭಾರತೀಯ ಸಿಬ್ಬಂದಿ ಸೇರಿದಂತೆ 14 ಮಂದಿ ಮೃತಪಟ್ಟಿದ್ದಾರೆ. ರಷ್ಯಾದ ಜಲಪ್ರದೇಶದಲ್ಲಿ ಸೋಮವಾರ ಈ ದುರ್ಘ‌ಟನೆ ಸಂಭವಿಸಿದೆ. ಎರಡೂ ನೌಕೆಗಳು ತಂಜಾನಿಯಾ ಧ್ವಜಗಳನ್ನು ಹೊಂದಿದ್ದವು. ಒಂದು ನೌಕೆಯಲ್ಲಿ ದ್ರವೀಕೃತ ನೈಸರ್ಗಿಕ ಅನಿಲ(ಎಲ್‌ಎನ್‌ಜಿ) ಇದ್ದರೆ, ಮತ್ತೂಂದು ಟ್ಯಾಂಕರ್‌ ಅನ್ನು ಹೊಂದಿತ್ತು. ಇಂಧನವನ್ನು ಒಂದು ನೌಕೆಯಿಂದ ಮತ್ತೂಂದಕ್ಕೆ ವರ್ಗಾಯಿಸುವ ವೇಳೆ ಅಗ್ನಿ ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

Advertisement

ಕ್ಯಾಂಡಿ ಎಂಬ ಹೆಸರಿನ ಒಂದು ನೌಕೆಯಲ್ಲಿ 8 ಮಂದಿ ಭಾರತೀಯರು ಮತ್ತು 9 ಮಂದಿ ಟರ್ಕಿ ಪ್ರಜೆಗಳು ಇದ್ದರು. ಮಾಯೆಸ್ಟ್ರೋ ಹೆಸರಿನ ಮತ್ತೂಂದು ನೌಕೆಯಲ್ಲಿ 7 ಮಂದಿ ಭಾರತೀಯರು ಸೇರಿದಂತೆ 15 ಮಂದಿ ಸಿಬ್ಬಂದಿಯಿದ್ದರು. ಘಟನೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ಆದರೆ, 14 ಮಂದಿ ಮೃತಪಟ್ಟಿರುವುದು ದೃಢವಾಗಿದೆ ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ, ಭಾರತವು ರಷ್ಯಾ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದು, ಅಗತ್ಯ ಸಹಕಾರ ನೀಡುವುದಾಗಿ ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಕುಮಾರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next