Advertisement
ಅರ್ಪಿತ್ ಪ್ಯಾಲೇಸ್ ಹೊಟೇಲ್‌ನ 2ನೇ ಮಹಡಿಯಲ್ಲಿ ಬೆಳಗ್ಗೆ 3.30ಕ್ಕೆ ಬೆಂಕಿ ಕಾಣಿಸಿಕೊಂಡಿತು. 45 ಕೊಠಡಿಗಳಿರುವ ಅದರಲ್ಲಿ 53 ಮಂದಿ ಇದ್ದರು. ಈ ಸಮಯದಲ್ಲಿ ಎಲ್ಲರೂ ಗಾಢ ನಿದ್ದೆಯಲ್ಲಿ ದ್ದರು. ಶಾರ್ಟ್ ಸರ್ಕ್ನೂಟ್‌ನಿಂದಾಗಿ ಈ ದುರ್ಘಟನೆ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
13 ಮಂದಿಯ ಮೃತದೇಹಗಳನ್ನು ಗುರುತಿಸಲಾಗಿದೆ.
ದಿಲ್ಲಿ ಸರಕಾರ ಘಟನೆಗೆ ಸಂಬಂಧಿಸಿ ದಂತೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದೆ. ಜತೆಗೆ ಅಸುನೀಗಿದವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರವನ್ನೂ ಘೋಷಿಸಿದೆ. ರಾಷ್ಟ್ರಪತಿ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶೋಕ ವ್ಯಕ್ತಪಡಿಸಿದ್ದಾರೆ. ಕೇರಳದ ಒಂದೇ ಕುಟುಂಬದ ಮೂವರು ಬಲಿ: ದಿಲ್ಲಿಯಿಂದ ಹರಿದ್ವಾರಕ್ಕೆ ತೆರಳುವ ಮುನ್ನ ಹೋಟೆಲ್‌ನಲ್ಲಿ
ತಂಗಿದ್ದ ಕೇರಳದ ಒಂದೇ ಕುಟುಂಬದ ಮೂವರು ಅವಘಡದಲ್ಲಿ ಸಜೀವದಹನ ವಾಗಿದ್ದಾರೆ. ಬೆಳಗ್ಗೆ 3.30ಕ್ಕೆ ಹರಿದ್ವಾರಕ್ಕೆ ಹೊರಡಲು ಸಿದ್ಧರಾಗುತ್ತಿದ್ದೆವು. ಅಷ್ಟರಲ್ಲಿ ಕೊಠಡಿಯ ಕರೆಂಟ್ ಹೋಯಿತು. ಕ್ಷಣಮಾತ್ರದಲ್ಲಿ ದಟ್ಟ ಹೊಗೆ ಆವರಿಸಿತು. ಬೆಂಕಿಯ ಕೆನ್ನಾಲಿಗೆಗೆ ನನ್ನ ಸಹೋದರಿ, ತಾಯಿ ಮತ್ತು ಅಣ್ಣ ಸಾವಿಗೀಡಾದರು ಎಂದು ಕೇರಳದ ಎರ್ನಾಕುಲಂನ ಸೋಮಶೇಖರ್ ಹೇಳಿದ್ದಾರೆ. ಇನ್ನಿಬ್ಬರು ಮ್ಯಾನ್ಮಾರ್‌ನವರು ಎಂದು ಗುರುತಿಸಲಾಗಿದೆ.
Related Articles
Advertisement