Advertisement
ಕೆಂಪು ಎದೆಯ ಮಕರಂದ ಅಂತಲೂ ಈ ಹಕ್ಕಿಯನ್ನು ಕರೆಯುತ್ತಾರೆ.Fire-brested Flowerpecker (Dicaeum Ignipectus) R -Sparrow ಭಾರತದ ಹಕ್ಕಿಗಳಲ್ಲಿ ಅತಿ ಚಿಕ್ಕದು ಎಂಬ ಹೆಗ್ಗಳಿಕೆ ದಕ್ಕಿದೆ. ಗುಬ್ಬಚ್ಚಿಗಿಂತ ಚಿಕ್ಕದಾದ ಹೊಳೆವ ನೀಲಿಗಪ್ಪು, ಬೆಂಕಿವರ್ಣದ ಎದೆ ಇರುವ ಸುಂದರ ಹಕ್ಕಿ. ಚಿಕ್ ಚಿಕ್ ಚಿಕ್, ಚಿಕ್ ಚಿಕ್ ಚಿಕ್ ಎಂದು ನಿರಂತರವಾಗಿ ಕೂಗುತ್ತಾ, ಹಾರುತ್ತಾ, ಹೂವಿನ ಒಳಗೆ ತನ್ನ ಚುಂಚನ್ನು, ಇಲ್ಲವೇ ತನ್ನ ದೇಹದ ಮುಕ್ಕಾಲು ಭಾಗವನ್ನು ಇಳಿಬಿಟ್ಟು ಮಕರಂದ ಹೀರುತ್ತದೆ. ಅದಕ್ಕಾಗಿ ಇದಕ್ಕೆ ಹೂ ಗುಬ್ಬಿ ಎಂಬ ಹೆಸರು ಬಂದಿದೆ.
Related Articles
Advertisement
ದಪ್ಪ ಚುಂಚಿನ ಹೂ ಗುಬ್ಬಿ, ಚಿಕ್ಕ ಹೂ ಗುಬ್ಬಿ, ಕೆಂಪು ಬೆನ್ನಿನ ಹೂಗುಬ್ಬಿ, ಕಪ್ಪು ಎದೆಯ ಹೂಗುಬ್ಬಿ, ಎಂದುಬಣ್ಣ ವ್ಯತ್ಯಾಸದಿಂದ ಉಪ ಜಾತಿಗಳನ್ನು ಗುರುತಿಸಲಾಗಿದೆ.
ಸಾಮಾನ್ಯವಾಗಿ 18 ರಿಂದ 20 ದಿನ ಕಾವು ಕೊಡುವುದು. ಮರಿಯಾಗಿ 12-18 ದಿನ ತಂದೆ ತಾಯಿಯ ಆರೈಕೆಯಲ್ಲಿ ಉಳಿಯುವುದು. ಅನಂತರ ಇವು ಪ್ರತ್ಯೆಕವಾಗಿ ಉಳಿಯುವುವೋ, ಇಲ್ಲವೇ ತಂದೆ ತಾುಯರ ಜೊತೆ ಸಕುಟುಂಬಿಯಾಗಿ ಇರುವುದೋ? ಈಕುರಿತು ಅಧ್ಯಯನ ನಡೆಯಬೇಕಿದೆ. ಮರಿಯಾದ ನಂತರ ಯಾವವಿಧದ ಆಹಾರ ನೀಡುವುದು? ಆರಂಭದ ದಿನಗಳಲ್ಲಿ ಎಂತಹ ಆಹಾರ ಕೊಡುವುದು, ಮರಿಗಳಿಗೆ ಚಿಕ್ಕ ಕೀಟ ನೀಡುವುದೋ?ಇಲ್ಲವೇ ಹೂನ ಮಕರಂದ, ಅಥವಾ ಪರಾಗವನ್ನು ತಿನ್ನಿಸುವುದೋ? ತಿಳಿದಿಲ್ಲ. ಮಕರಂದವನ್ನು ಹೇಗೆ ತನ್ನ ಚುಂಚಿನಲ್ಲಿ ತರುವುದು? ಈ ಎಲ್ಲಾ ಕುತೂಹಲದ ಪ್ರಶ್ನೆಗಳಿಗೆ ಅದರ ಸೂಕ್ಷ್ಮ ಅಧ್ಯಯನದ ನಂತರವೇ ಉತ್ತರಿಸಬೇಕಿದೆ. ಕಾಡಿನ ಮರ, ಹೂಬಿಡುವ ಬಳ್ಳಿ, ಹಣ್ಣಿನ ಮರಗಳ ಉಳಿವು, ಇದನ್ನು ಆದರಿಸಿ -ಈ ಪುಟ್ಟ ಹಕ್ಕಿಯ ಉಳಿವು. ಹಾಗಾಗಿ ಪುಟ್ಟ ಸುಂದರ ಹಕ್ಕಿಯ ಉಳಿವಿಗಾಗಿ ಹೂ ಗಿಡ, ಮರ, ಬಳ್ಳಿ ಉಳಿಸೋಣ . ಪರಾಗ ಸ್ಪರ್ಶ ಮಾಡಿ ಒಳ್ಳೆಯ ಹಣ್ಣು ಸಿಗುವಂತೆ ಸಹಾಯ ಮಾಡುವ -ಈ ಹಕ್ಕಿ ಯು ಉಪಕಾರ ಸ್ಮರಿಸಿ ಅದನ್ನೂ ಉಳಿಸಲು ಮುಂದಾಗೋಣ.
ಪಿ. ವಿ. ಭಟ್ ಮೂರೂರು