ಹೊಸದಿಲ್ಲಿ: ಇಲ್ಲಿನ ರಾಣಿ ಜಾನ್ಸಿ ರಸ್ತೆಯ ಅನಜ್ ಮಂಡಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಸುಮಾರು 43 ಕಾರ್ಮಿಕರು ಸಾವನ್ನಪ್ಪಿದ್ದ ದುರ್ಘಟನೆ ಭಾನುವಾರ ಮುಂಜಾನೆ ನಡೆದಿದೆ.
ಸ್ಥಳದಲ್ಲಿ 15 ಅಗ್ನಿ ಶಾಮಕ ದಳ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ.
ಇದುವರೆಗೆ 15ಕ್ಕೂ ಹೆಚ್ಚು ಕಾರ್ಮಿಕರನ್ನು ರಕ್ಷಿಸಿ ಆಸ್ಪತ್ರಗೆ ದಾಖಲಿಸಲಾಗಿದೆ. ಬೆಂಕಿಯ ತೀವ್ರತೆಯ ಕಾರಣದಿಂದ ಉಂಟಾದ ಹೊಗೆಯಿಂದ ಹಲವರು ತಲೆ ಸುತ್ತಿ ಬಿದ್ದಿದ್ದಾರೆ.
ಅಗ್ನಿ ಶಾಮಕ ದಳದ ಅಧಿಕಾರಿ ಸುನೀಲ್ ಚೌಧರಿ ಮಾಹಿತಿ ನೀಡಿದ್ದು, ಸುಮಾರು 600 ಚದರ ಅಡಿ ಸ್ಥಳದಲ್ಲಿ ಅಗ್ನಿ ಅವಘಡ ನಡೆದಿದೆ. ಒಳಗೆ ಶಾಲಾ ಬ್ಯಾಗುಗಳು, ಬಾಟಲ್ ಗಳು ಮತ್ತು ಇತರ ಸಾಮಾಗ್ರಿಗಳಿದ್ದು, ಇದರಿಂದಾಗಿ ಬೆಂಕಿಯ ತೀವ್ರತೆ ಹೆಚ್ಚುತ್ತಿದೆ ಎಂದಿದ್ದಾರೆ.