Advertisement

ವಿಧಾನಸೌಧ ಕ್ಯಾಂಟೀನ್‌ನಲ್ಲಿ ಬೆಂಕಿ!

09:57 AM Dec 13, 2019 | sudhir |

ಬೆಂಗಳೂರು:ವಿಧಾನಸೌಧ ತಳಮಹಡಿಯಲ್ಲಿನ ಕ್ಯಾಂಟೀನ್‌ನಲ್ಲಿ ಗುರುವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.

Advertisement

ಕ್ಯಾಂಟೀನ್‌ ಅಡುಗೆಕೋಣೆಗೆ ಸಂಪರ್ಕ ಕಲ್ಪಿಸಿರುವ ಪೈಪ್‌ನಿಂದ ಗ್ಯಾಸ್‌ ಸೋರಿಕೆಯಾಗಿ, ಸಣ್ಣದಾಗಿ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಗಮನಿಸಿದ ಕ್ಯಾಂಟೀನ್‌ ಸಿಬ್ಬಂದಿ ಆತಂಕಗೊಂಡು ಬೆಂಕಿ ಆರಿಸಿದ್ದಾರೆ. ಬಳಿಕ ಗ್ಯಾಸ್‌ ಸಂಪರ್ಕವನ್ನೂ ಕಡಿತಗೊಳಿಸಿದ್ದಾರೆ.

ಅವಘಡಕ್ಕೆ ನಿಖರ ಕಾರಣ ಗೊತ್ತಾಗಿಲ್ಲ. ಗ್ಯಾಸ್‌ ಸೋರಿಕೆಯಿಂದ ಘಟನೆ ಸಂಭವಿಸಿರಬಹುದು. ಯಾವುದೇ ಹೆಚ್ಚಿನ ಅನಾಹುತ ಆಗಿಲ್ಲ ಎಂದು ಪೊಲೀಸರು ತಿಳಿಸಿದರು.

ಎರಡು ದಿನಗಳ ಹಿಂದಷ್ಟೇ ಬಹುಮಹಡಿ ಕಟ್ಟಡದ ಎರಡನೇ ಮಹಡಿಯಲ್ಲಿರುವ ಮುಖ್ಯಮಂತ್ರಿಗಳ ಸಲಹೆಗಾರರಾದ (ಇ-ಆಡಳಿತ) ಬೇಳೂರು ಸುದರ್ಶನ್‌ ಅವರ ಕಚೇರಿಯಲ್ಲಿ ಶಾರ್ಟ್‌ ಸರ್ಕ್ನೂಟ್‌ನಿಂದ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಸಿಬ್ಬಂದಿ ಬೆಂಕಿ ನಂದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next