ಘಾಜಿಯಾಬಾದ್: ಇಲ್ಲಿನ ಸಾಹಿಬಾ ಬಾದ್ ಭೂಪುರ ಕೃಷ್ಣ ವಿಹಾರ್ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಸುಮಾರು 200 ಕೊಳೆಗೇರಿಗಳು (ಸ್ಲಂ-ಪ್ರದೇಶ) ಅಪಾಯದಲ್ಲಿದೆ ಎಂದು ವರದಿಯಾಗಿದೆ.
ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ದೌಡಾಯಿಸಿದ್ದು, ಈ ಪ್ರದೇಶದಲ್ಲಿ ವಾಸಿಸುವ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಥಳದಲ್ಲಿ ಇನ್ನೂ ಕೂಡ 30 ಅಗ್ನಿಶಾಮಕ ವಾಹನಗಳು ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿ: ಅಮೆರಿಕ ಮತಸಮರ: ಟ್ರಂಪ್, ಬೈಡೆನ್ ನಡುವೆ ತೀವ್ರ ಹಣಾಹಣಿ, ಯಾರಾಗಲಿದ್ದಾರೆ ವಿಶ್ವದ ದೊಡ್ಡಣ್ಣ?
ಈ ಭಾರೀ ಬೆಂಕಿ ಅವಘಢಕ್ಕೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಪರಿಸ್ಥಿತಿಯನ್ನು ಶೀಘ್ರವಾಗಿ ನಿಯಂತ್ರಣಕ್ಕೆ ತರುವುದು ನಮ್ಮ ಆದ್ಯತೆಯಾಗಿದೆ. ಬೆಂಕಿಯಲ್ಲಿ ಅನೇಕ ಸ್ಲಂ ಪ್ರದೇಶಗಳು ನಾಶವಾಗಿವೆ. ಹಲವರನ್ನು ರಕ್ಷಿಸಿ , ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಮಂಗಳವಾರ (ನ.3) ರಾತ್ರಿ 10ರ ಸುಮಾರಿಗೆ ನಮಗೆ ಕರೆ ಬಂದಿತು, ಅದರ ನಂತರ ಯುಪಿ ಪೊಲೀಸ್ ಮತ್ತು ಅಗ್ನಿಶಾಮಕ ದಳದ ತಂಡ ಸ್ಥಳಕ್ಕೆ ಧಾವಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನೀರಜ್ ಕುಮಾರ್ ಜಾದೌನ್ ಹೇಳಿದ್ದಾರೆ.