Advertisement

ಸೂರತ್ ರಘುವೀರ್ ಮಾರುಕಟ್ಟೆಯಲ್ಲಿ ಭಾರೀ ಅಗ್ನಿ ಅವಘಡ: 40 ಅಗ್ನಿಶಾಮಕ ವಾಹನ ಸ್ಥಳಕ್ಕೆ ದೌಡು

10:19 AM Jan 22, 2020 | Mithun PG |

ಗುಜರಾತ್: ಬಟ್ಟೆ ಮಾರುಕಟ್ಟೆಯಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿದ ಘಟನೆ ಇಂದು ಮುಂಜಾನೆ ಸೂರತ್ ಬಳಿ ನಡೆದಿದೆ.

Advertisement

ಬೆಳಗಿನ ಜಾವ 4 ಗಂಟೆಯ ವೇಳೆ ರಘುವೀರ್ ಮಾರುಕಟ್ಟೆಯಲ್ಲಿ ಈ ಬೆಂಕಿ ಅವಘಡ ನಡೆದಿದ್ದು ಕಟ್ಟಡವೊಂದು ಹೊತ್ತಿಉರಿಯುತ್ತಿದೆ. ಸ್ಥಳಕ್ಕೆ 40 ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.

ಆದರೇ ಬೆಂಕಿ ಹತೋಟಿಗೆ ಸಿಗದೆ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದು. ಇದುವರೆಗೂ ಸಾವು-ನೋವು ಸಂಭವಿಸಿದ ಯಾವುದೇ ವರದಿಯಾಗಿಲ್ಲ.

ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next