Advertisement

ಮುಂಬೈ ಸಿಟಿ ಸೆಂಟರ್ ಮಾಲ್ ನಲ್ಲಿ ಅಗ್ನಿ ಅವಗಢ: 20 ಅಗ್ನಿಶಾಮಕ ವಾಹನಗಳು ದೌಡು

12:54 PM Oct 23, 2020 | keerthan |

ಮುಂಬೈ: ಇಲ್ಲಿನ ದಕ್ಷಿಣ ಮುಂಬೈನಲ್ಲಿರುವ ಸಿಟಿ ಸೆಂಟರ್ ಮಾಲ್ ನಲ್ಲಿ ಭಾರಿ ಅಗ್ನಿ ಅವಗಢ ಸಂಭವಿಸಿದ್ದು, ಸುಮಾರು 20 ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದೆ.

Advertisement

ಗುರುವಾರ ರಾತ್ರಿ ಈ ಅಗ್ನಿ ಅವಗಢ ನಡೆದಿದ್ದು, ಆ ವೇಳೆಯಲ್ಲಿ ಮಾಲ್ ನಲ್ಲಿ 200-300 ಮಂದಿ ಇದ್ದರು  ಎಂದು ಅಗ್ನಿಶಾಮಕ ದಳ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸ್ಥಳದಲ್ಲಿ 20 ಅಗ್ನಿ ಶಾಮಕ ದಳ ವಾಹನಗಳು, ಏಳು ಜಟ್ಟಿಗಳ ಸಹಾಯದಿಂದ ಕಾರ್ಯಾಚರಣೆ ಮಾಡಲಾಗಿದೆ. ನಾಲ್ಕು ಮಹಡಿಯ ಕಟ್ಟಡದ ಹಲವು ಕಡೆ ಅಗ್ನಿಯ ಕೆನ್ನಾಲಿಗೆ ಹರಡಿದೆ.

ಘಟನೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಅಗ್ನಿಶಾಮಕ ಸಿಬ್ಬಂದಿಯೋರ್ವರಿಗೆ ಗಾಯವಾಗಿದ್ದು, ಕೂಡಲೇ ಅವರನ್ನು ಮುಂಬೈ ನ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ:ಪ್ರಣಾಳಿಕೆಯಲ್ಲಿ ಉಚಿತ ಲಸಿಕೆ ಸದ್ದು; ರಂಗೇರಿದ ಬಿಹಾರ ಚುನಾವಣೆ ಕಣ

Advertisement

ಏತನ್ಮಧ್ಯೆ, ಎಲ್ಲಾ 200-300 ಜನರನ್ನು ಅಗ್ನಿಶಾಮಕ ದಳದ ಅಧಿಕಾರಿಗಳು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಆದರೆ ಇನ್ನೂ ಬೆಂಕಿ ನಿಯಂತ್ರಣದಲ್ಲಿರಲಿಲ್ಲ ಎಂದು ವರದಿ ತಿಳಿಸಿದೆ.

ಅಗ್ನಿಶಾಮಕ ದಳದ ಅಧಿಕಾರಿಗಳ ಪ್ರಕಾರ, ಬೆಂಕಿಯ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಇದು ನಗರದಲ್ಲಿ ಗುರುವಾರ ಸಂಭವಿಸಿದ ಎರಡನೇ ಅಗ್ನಿ ಅವಗಢ ಎಂದು ವರದಿಯಾಗಿದೆ. ಕುರ್ಲಾ ವೆಸ್ಟ್ನ ಗಾರ್ಮೆಂಟ್ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಎರಡು ಗಂಟೆಗಳಿಗಿಂತ ಹೆಚ್ಚು ಪ್ರಯತ್ನದ ನಂತರ ಅದನ್ನು ಬೆಂಕಿ ನಂದಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next