Advertisement

ಹಬ್ಬದ ದಿನವೇ ಬೈಕ್ ಶೋರೂಮ್ ಗೆ ನಲ್ಲಿ ಅಗ್ನಿ ಅವಘಡ: ಸುಟ್ಟು ಕರಕಲಾದ ಬೈಕ್ ಗಳು

09:13 AM Nov 15, 2020 | keerthan |

ತುಮಕೂರು: ಇಲ್ಲಿ ಪ್ರತಿಷ್ಠಿತ ಬೈಕ್ ಶೋ ರೂಮ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕೋಟ್ಯಂತರ ರೂ. ಬೆಲೆಯ ಬೈಕ್ ಗಳು ಸುಟ್ಟು ಕರಕಲಾಗಿದೆ.

Advertisement

ನಗರದ ಬಿ.ಎಚ್.ರಸ್ತೆಯಲ್ಲಿರುವ ಸೆಂಚುರಿ ಹೋಂಡಾ ಶೋ ರೂಮ್ ನಲ್ಲಿ  ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಢ ಸಂಭವಿಸಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ.

ಇದನ್ನೂ ಓದಿ:ಹೊಳೆ ಬದಿ ಹಣತೆ ಹಚ್ಚಿ ದೀಪಾವಳಿ: ಜನಪ್ರತಿನಿಧಿಗಳ ಗಮನ ಸೆಳೆಯಲು ವಿನೂತನ ಪ್ರತಿಭಟನೆ

Advertisement

ಈ ಬಗ್ಗೆ ಮಾಹಿತಿ ನೀಡಿರುವ ಶೋರೂಮ್ ಪಾಲುದಾರ ಪ್ರವೀಣ್, ರಾತ್ರಿ ಶೋ ರೂಮ್ ನಲ್ಲಿ ದೀಪಾವಳಿ ಪೂಜೆ ಮುಗಿಸಿ 10.30 ಕ್ಕೆ ಮನೆಗೆ ಹೋದೆವು. ಯಾವುದೇ ದೀಪವನ್ನೂ ಬಿಟ್ಟಿರಲಿಲ್ಲ. ಮಧ್ಯರಾತ್ರಿ 1.30 ರ ವೇಳೆಯಲ್ಲಿ ಶೋ ರೂಮ್ ಗೆ ಬೆಂಕಿ ಬಿದ್ದಿರುವ ಮಾಹಿತಿ ನೀಡಿದರು.

ಬೆಂಕಿ ಹೇಗೆ ಬಿದ್ದಿದೆ ಎನ್ನುವ ಮಾಹಿತಿ ಇಲ್ಲ ಅದು ದೇವರಿಗೆ ಗೊತ್ತು ಎಂದರು. ಈ ಘಟನೆಯಿಂದ 60 ಹೊಸ ಬೈಕ್ ಮತ್ತು ಬಿಡಿಭಾಗ ಶೋರೂಮ್ ಸುಟ್ಟು ಹೋಗಿದೆ. ಶೋ ರೂಮ್ ನಲ್ಲಿ ಇದ್ದ ದಾಖಲೆ ಪತ್ರಗಳು ಸುಟ್ಟ ಕರಕಲಾಗಿದೆ. ಕೋಟ್ಯಂತರ  ರೂ ನಷ್ಟವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next