Advertisement

ವಿಜಯ್‌ ವಲ್ಲಭ್‌ ಆಸ್ಪತ್ರೆಯಲ್ಲಿ ಬೆಂಕಿ ಪ್ರಕರಣ: ಇಬ್ಬರ ಬಂಧನ

11:54 AM Apr 26, 2021 | Team Udayavani |

ವಿರಾರ್‌: ವಿರಾರ್‌ನ ವಿಜಯ್‌ ವಲ್ಲಬ್‌ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ದುರಂತಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ವ್ಯವಸ್ಥಾಪಕರಾದ ದಿಲೀಪ್‌ ಶಾ ಮತ್ತು ಶೈಲೇಶ್‌ ಪಾಠಕ್‌ ನನ್ನು ಕ್ರೈಂ ಬ್ರಾಂಚ್‌ ಪೊಲೀಸ್‌ ಯೂನಿಟ್‌ -3 ರ ತಂಡ ರವಿವಾರ ಬಂಧಿಸಿದೆ.

Advertisement

ಈ ಕುರಿತು ಮಾತನಾಡಿದ ಪೊಲೀಸ್‌ ಇನ್‌ಸ್ಪೆಕ್ಟರ್‌ ಪ್ರಮೋದ್‌ ಬಡಾಖ್‌ ಅವರು, ಪ್ರಕರಣದ ತನಿಖೆ ಮುಂದುವರಿಸಿದ್ದು, ದರಂತಕ್ಕೆ ಕಾರಣರಾದ ಇತತರನ್ನೂ ಬಂಧಿಸಲಾಗುವುದು ಎಂದರು.
ವಿಜಯ್‌ ವಲ್ಲಭ್‌ ಆಸ್ಪತ್ರೆಯ ಐಸಿಯು ವಾರ್ಡ್‌ನ ಎಸಿ ನ್ಪೋಟದಿಂದ 15 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದರು. ಈ ದುರಂತಕ್ಕೆ ಆಸ್ಪತ್ರೆಯ ಆಡಳಿವೇ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದು, ಇಬ್ಬರನ್ನು ಬಂಧಿಸಲಾಗಿದೆ. ತನಿಖೆಗೆ ಐವರ ಸಮಿತಿ

ವಿಜಯ್‌ ವಲ್ಲಬ್‌ ಖಾಸಗಿ ಆಸ್ಪತ್ರೆ ಬೆಂಕಿ ಪ್ರಕರಣದ ತನಿಖೆ ನಡೆಸಲು ರಾಜ್ಯ ಸರಕಾರವು ಪಾಲ^ರ್‌ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಐವರು ಸದಸ್ಯರ ಸಮಿತಿ ರಚಿಸಿದೆ. ಈ ಸಮಿತಿಗೆ 15 ದಿನಗಳಲ್ಲಿ ತನಿಖೆಯ ವರದಿ ಸಲ್ಲಿಸುವಂತೆ ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next