ಮುಂಬೈ: ನಗರದ ಕಾಂದಿವಲಿಯಲ್ಲಿರುವ ಸಾಯಿಬಾಬಾ ದೇವಸ್ಥಾನದಲ್ಲಿ ಭಾನುವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಇಬ್ಬರು ಮೃತ ಪಟ್ಟು, ಓರ್ವನ ಸ್ಥಿತಿ ಗಂಭೀರವಾಗಿದೆ.
ಮೃತ ವ್ಯಕ್ತಿಗಳನ್ನು ಸುಭಾಷ್ ಖೋಡೆ (25) ಹಾಗೂ ಯುವರಾಜ್ ಪವಾರ್(25) ಎಂದು ಗುರುತಿಸಲಾಗಿದ್ದು, ದುರಂತ ಸಂಭವಿಸಿದ ತಕ್ಷಣ ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಇನ್ನೋರ್ವ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಗಂಗಾವತಿ: ಮತ ಚಲಾಯಿಸಿ ಬ್ಯಾಲೆಟ್ ಪೇಪರ್ ಹರಿದು ಹಾಕಿದ ಕುಡುಕರು; ಪ್ರಕರಣ ದಾಖಲು
ಈ ಮೂವರು ದೇವಸ್ಥಾನದ ಬಾಗಿಲನ್ನು ಮುಚ್ಚಿ ಒಳಗೆ ಮಲಗಿದ್ದರು ಎನ್ನಲಾಗಿದ್ದು. ಭಾನುವಾರ ಬೆಳಗ್ಗಿನ ಜಾವ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಬೆಂಕಿಯ ಕೆನ್ನಾಲಿಗೆ ದೇವಸ್ಥಾನದ ಸುತ್ತಮುತ್ತ ಆವರಿಸಿದ್ದರಿಂದ ಮೂವರು ತೀವ್ರತರವಾದ ಸುಟ್ಟ ಗಾಯಗಳಿಂದ ಬಳಲಿದ್ದರು.
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಆದರೇ ಘಟನೆಯಲ್ಲಿ ಇಬ್ಬರು ಕೊನೆಯುಸಿರೆಳೆದಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.