Advertisement

ಕೂಡಗಿ ಎನ್.ಟಿ.ಪಿ.ಸಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಅಗ್ನಿ ದುರಂತ: ತಪ್ಪಿದ ಅನಾಹುತ

01:20 PM Jun 10, 2022 | Team Udayavani |

ವಿಜಯಪುರ: ಜಿಲ್ಲೆಯ ಕೇಂದ್ರ ಸರ್ಕಾರಿ ಒಡೆತನದ ಕೂಡಗಿ ಎನ್.ಟಿ.ಪಿ.ಸಿ. ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ, ಅಪಾಯ ಸಂಭವಿಸಿಲ್ಲ.

Advertisement

ಸ್ಥಾವರದ ಟಿಪಿ-2 ಕಲ್ಲಿದ್ದಲು ಘಟಕದಲ್ಲಿ ಸ್ಫೋಟವಾಗಿದೆ. ಕಲ್ಲಿದ್ದಲು ಸಾಗಾಣಿಕೆಯ ಯಂತ್ರ ಚಾಲನೆಯಲ್ಲಿ ಇರುವಾಗ ಬೇರಿಂಗ್ ತಿರುಗುತ್ತ ಶಾಖ ಉತ್ಪದನೆಯಿಂದ ರಬ್ಬರ್ ಬೆಲ್ಟ್ ಗೆ ಬೆಂಕಿ ಹೊತ್ತಿಕೊಂಡು ದುರಂತ ಸಂಭವಿಸಿದೆ.

ಶುಕ್ರವಾರ ಬೆಳಿಗ್ಗೆ 8.40 ರ ಸುಮಾರಿಗೆ ಆಕಸ್ಮಿಕ ಅವಘಡ ಸಂಭವಿಸಿದ್ದು, ಸುದೈವಶಾತ್ ಸ್ಥಳದಲ್ಲಿದ್ದ ಯಾವ ಕಾರ್ಮಿಕರಿಗೂ ಹಾನಿ ಸಂಭವಿಸಿಲ್ಲ.

ದುರಂತ ನಡೆದು ಗಂಟೆ ಮೇಲಾದರೂ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿಯೇ ಇರಲಿಲ್ಲ. ಹೀಗಾಗಿ ಕೇಂದ್ರ ಸರ್ಕಾರಿ ಒಡೆತನದ ಬೃಹತ್ ವಿದ್ಯುತ್ ಉತ್ಪನ್ನ ಘಟಕದಲ್ಲಿ ಸುರಕ್ಷತೆಯ ಪ್ರಶ್ನೆ ಎದ್ದಿದೆ.

ಇದನ್ನೂ ಓದಿ:ಅರೆಹಳ್ಳ ಅಣೆಕಟ್ಟು ಕಾಮಗಾರಿ ಮುಕ್ತಾಯ ಹಂತಕ್ಕೆ : ಕೇಶ್ವಾರ

Advertisement

ಕೂಡಗಿ ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ ಕಾರ್ಯನಿರ್ವಹಣೆ ಮಾಡುವ ತುರ್ತು ಸ್ಪಂದನಾ ತಂಡ (ಕ್ವಿಕ್ ರೆಸ್ಪಾನ್ಸ್ ಟೀಮ್) ಕೆಲಸವೇನು? ಕ್ಯೂ.ಆರ್.ಟಿ. ವಿಭಾಗ ನಿಷ್ಕ್ರಿಯಗೊಂಡಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಅಗ್ನಿ ದುರಂತ ಸಂಭವಿಸುತ್ತಲೇ ಸ್ಥಾವರ ವ್ಯಾಪ್ತಿಯ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next