Advertisement

ನೈಟ್ ಕ್ಲಬ್ ನಲ್ಲಿ ಅಗ್ನಿ ಅವಗಢ: 13 ಮಂದಿ ಸಾವು, 35 ಜನರಿಗೆ ಗಾಯ

09:11 AM Aug 05, 2022 | Team Udayavani |

ಬ್ಯಾಂಕಾಕ್‌: ಥಾಯ್ಲೆಂಡ್‌ ರಾಜಧಾನಿ ಬ್ಯಾಂಕಾಕ್‌ನ ಆಗ್ನೇಯ ಭಾಗದಲ್ಲಿರುವ ಚೋನ್‌ಬುರಿ ಪ್ರಾಂತ್ಯದ ನೈಟ್‌ ಕ್ಲಬ್‌ ನಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡ ದುರ್ಘಟನೆಯೊಂದು ನಡೆದಿದೆ.

Advertisement

ಘಟನೆಯಲ್ಲಿ ಸುಮಾರು 13 ಜನರು ಸಾವನ್ನಪ್ಪಿದ್ದು, 35 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:ಮಂಗಳೂರು: ನಾಲ್ವರ ಹಂತಕ ಪ್ರವೀಣ್‌ ಬಿಡುಗಡೆಗೆ ಸಿದ್ಧತೆ; ಸಂತ್ರಸ್ತರ ಸಂಬಂಧಿಕರಿಂದ ಆಕ್ಷೇಪ

ಸಟ್ಟಾಹಿಪ್ ಜಿಲ್ಲೆಯ ಮೌಂಟೇನ್ ಬಿ ನೈಟ್‌ಕ್ಲಬ್‌ನಲ್ಲಿ ಬೆಂಕಿಯು ಸುಮಾರು ಒಂದು ಗಂಟೆಗೆ ಕಾಣಿಸಿಕೊಂಡಿದೆ, ಮೃತಪಟ್ಟವರೆಲ್ಲಾ ಥಾಯ್ಲೆಂಡ್ ಪ್ರಜೆಗಳು ಎಂದು ಪೋಲಿಸ್ ಕರ್ನಲ್ ವುಟ್ಟಿಪಾಂಗ್ ಸೋಮ್‌ಜೈ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next