ನವದೆಹಲಿ: 25 ವರ್ಷದ ಹಿಂದೆ ಸಂಭವಿಸಿದ ಅಗ್ನಿ ದುರಂತದಲ್ಲಿ 59 ಮಂದಿ ಸಾವನ್ನಪ್ಪಿದ್ದ ದೆಹಲಿಯ ಉಪಹಾರ್ ಚಿತ್ರಮಂದಿರದಲ್ಲಿ ಇಂದು ಮತ್ತೆ ಅಗ್ನಿ ಅವಘಡ ಸಂಭವಿಸಿದೆ.
1997ರ ಅಗ್ನಿ ದುರಂತದ ನಂತರ ಸಿನಿಮಾ ಥಿಯೇಟರ್‌ನನ್ನು ಮುಚ್ಚಲಾಗಿತ್ತು. ಆದರೆ ಇಂದು ಬೆಳಗ್ಗಿನ ಜಾವಾ ಮತ್ತೆ ಅಗ್ನಿ ಅವಘಡ ಸಂಭವಿಸಿದ್ದು, ಸಿನಿಮಾ ಹಾಲ್‍ನಲ್ಲಿದ್ದ ಕೆಲವು ಆಸನಗಳು, ಪೀಠೋಪಕರಣಗಳು ಮತ್ತು ತ್ಯಾಜ್ಯಗಳು ಬೆಂಕಿಗಾಹುತಿಯಾಗಿವೆ .
ದಿಲ್ಲಿ ಅಗ್ನಿಶಾಮಕ ದಳದ ನಿರ್ದೇಶಕ ಅತುಲ್ ಗಾರ್ಗ್ ಹೇಳಿಕೆಯಂತೆ ರವಿವಾರ ಮುಂಜಾನೆ 4.46 ರ ಹೊತ್ತಿಗೆ ಚಿತ್ರಮಂದಿರಕ್ಕೆ ಬೆಂಕಿ ಬಿದ್ದಿರುವ ಕುರಿತು ಕರೆ ಬಂದಿದೆ ಘಟನಾ ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ತಂಡ ಸತತ ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದೆ ಎಂದಿದ್ದಾರೆ.
ಇಂದು ನಡೆದ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಕಟ್ಟಡದ ಒಳಗಿದ್ದ ಪೀಠೋಪಕರಣಗಳು ಬೆಂಕಿಗಾಹುತಿಯಾಗಿವೆ.
ಇದನ್ನೂ ಓದಿ : ಸರ್ಕಾರದ ನಿರ್ಲಕ್ಷ್ಯದಿಂದ 40 ಲಕ್ಷ ಭಾರತೀಯರು ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ: ರಾಹುಲ್
ದೆಹಲಿಯ ಗ್ರೀನ್ ಪಾರ್ಕ್ ಪ್ರದೇಶದಲ್ಲಿರುವ ಉಪಹಾರ್ ಚಿತ್ರಮಂದಿರವು ಜೂನ್ 13, 1997 ರಂದು ಭಾರಿ ಬೆಂಕಿಯ ಅವಘಡಕ್ಕೆ ಸಾಕ್ಷಿಯಾಗಿತ್ತು, ಈ ಘಟನೆಯಲ್ಲಿ 59 ಜನರು ಸಾವನ್ನಪ್ಪಿದರು ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡರು.