Advertisement

ಬೆಂಕಿ ಆಕಸ್ಮಿಕ: ಸುಟ್ಟು ಕರಕಲಾದ ಹಡೀಲು ಭೂಮಿ

08:17 PM May 15, 2019 | Sriram |

ಗುರುಪುರ: ಬೆಂಕಿ ಆಕಸ್ಮಿಕದಿಂದಾಗಿ ಗುರುಪುರ ದೋಣಿಂಜೆಯ ಹಡೀಲು ಭೂಪ್ರದೇಶ ಹೊತ್ತಿ ಉರಿದು ಮರಗಿಡಗಳು ಸುಟ್ಟು ಕರಕಲಾದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.

Advertisement

ಸೋಮವಾರ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಗಾಳಿಯ ತೀವ್ರತೆ ಕಡಿಮೆ ಇದ್ದ ಕಾರಣ ತಣ್ಣಗಾಗಿತ್ತು. ಆದರೆ ಮಂಗಳವಾರ ರಾತ್ರಿ ಗಾಳಿಯ ಹೆಚ್ಚಾಗಿದ್ದರಿಂದ ಬೆಂಕಿ ಮತ್ತೆ ವಿಸ್ತರಿಸಿ ಮರಗಿಡಗಳನ್ನು ಆಹುತಿ ಪಡೆದಿದೆ.

ತುರ್ತು ಸಂದೇಶ ರವಾನೆ
ವಿಸ್ತಾರವಾದ ಒಣಪ್ರದೇಶ ಸಂಪೂರ್ಣವಾಗಿ ಬೆಂಕಿಯ ಕೆನ್ನಾ ಲಿಗೆಗೆ ಸಿಲುಕಿ ಉರಿದಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿ ಸಿತ್ತು. ಪರಿಸರದೆಲ್ಲೆಡೆ ಹೊಗೆ ವ್ಯಾಪಿಸಿದ್ದು, ಅಗ್ನಿಯನ್ನು ನಿಯಂತ್ರಿ ಸಲು ಕಠಿಣವಾಗಿರುವುದರಿಂದ ಮಂಗಳೂರು ಅಗ್ನಿ ಶಾಮಕ ದಳಕ್ಕೆ ತುರ್ತು ಸಂದೇಶ ರವಾನಿಸಲಾಯಿತು.

ಬೆಂಕಿನಿಯಂತ್ರಣ ವಾಹನ ಸ್ಥಳಕ್ಕೆ ಆಗಮಿಸಿ, ಅದರ ಟ್ಯಾಂಕರ್‌ ಸಿಬಂದಿ ನೀರು ಹಾಯಿಸಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ. ಸುಮಾರು ಒಂದುವರೆ ಗಂಟೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆ ಸಲಾಯಿತು.

ಕಿಡಿಗೇಡಿಗಳ ಕೃತ್ಯ ಶಂಖೆ
ಕೃತ್ಯದ ಹಿಂದೆ ಕಿಡಿಗೇಡಿಗಳ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತ ವಾಗಿದೆ.ಹತ್ತಿರದಲ್ಲಿ ಬೆಳೆಸಲಾದ ತರಕಾರಿ ತೋಟಕ್ಕೆ ನವಿಲುಗಳ ಕಾಟ ತಪ್ಪಿಸಲು,ದೂರದ ಹಡೀಲು ಭೂಮಿಯಲ್ಲಿ ಬೆಳೆದಿರುವ ಭಾರೀ ಗಿಡಗಂಟಿ,ಒಣ ಹುಲ್ಲಿಗೆ ಬೆಂಕಿ ಹಚ್ಚಿರಬೇಕೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next