Advertisement
ಆದರೂ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ, ಇಂತಹ ಅವಘಡಗಳನ್ನು ತಡೆಗಟ್ಟಬಹುದು. ಕಳೆದ ವರ್ಷ ಜಿಲ್ಲೆಯಲ್ಲಿ ಒಟ್ಟಾರೆ 351 ಅಗ್ನಿ ಅವಘಡ ಪ್ರಕರಣಗಳು ಸಂಭವಿಸಿದ್ದರೆ, ಈ ವರ್ಷದ ಜನವರಿ ತಿಂಗಳೊಂದರಲ್ಲಿಯೇ ಬರೋಬ್ಬರಿ 93 ಪ್ರಕರಣಗಳು ವರದಿಯಾಗಿವೆ. ಇದಕ್ಕೂ ಹಿಂದಿನ ವರ್ಷಗಳಲ್ಲಿ ಅಂದರೆ ಕೊರೊನಾಗಿಂತಲೂ ಮುನ್ನ ವರ್ಷಕ್ಕೆ ಸುಮಾರು 800ರಷ್ಟು ಅಗ್ನಿ ಅವಘಡದಂತಹ ಪ್ರಕರಣಗಳು ಸಂಭವಿಸುತ್ತಿದ್ದವು. ಈಗ ಈ ಪ್ರಮಾಣ ಒಂದಷ್ಟರ ಮಟ್ಟಿಗೆ ಕಡಿಮೆಯಾಗಿರುವುದು ಒಳ್ಳೆಯ ಬೆಳವಣಿಗೆ.
ಪ್ರಕರಣಗಳು ಸಂಭವಿಸುತ್ತಿದೆ. ಉಳಿದಂತೆ ಕೈಗಾರಿಕಾ ಕಟ್ಟಡಗಳು, ವಾಣಿಜ್ಯ ಕಟ್ಟಡ, ಗ್ಯಾಸ್ ಸೋರಿಕೆ, ಮಳಿಗೆಗಳಿಗೆ ಬೆಂಕಿಪ್ರಕರಣಗಳು ಸೇರಿವೆ. ರಕ್ಷಣಾ ಕರೆ-115 ಪ್ರಕರಣ
Related Articles
Advertisement
ಅಗ್ನಿಶಾಮಕ ಠಾಣಾವಾರು ಅಗ್ನಿಅವಘಡ ಪ್ರಕರಣ ಠಾಣೆ
2022 2023 (ಜನವರಿ)ಉಡುಪಿ 149 28
ಕಾರ್ಕಳ 103 20
ಕುಂದಾಪುರ 50 20
ಬೈಂದೂರು 19 15
ಮಲ್ಪೆ 30 10
ಒಟ್ಟು 351 93 “ಜಾಗೃತಿ ಅವಶ್ಯ”
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇತ್ತೀಚಿಗೆ ಅಂದರೆ ಕೊರೊನಾದ ಅನಂತರದಿಂದ ಅಗ್ನಿ ಅವಘಡ ಪ್ರಕರಣಗಳ ಸಂಖ್ಯೆ ಒಂದಷ್ಟು ಕಡಿಮೆಯಾಗಿದೆ. ಕಾಡ್ಗಿಚ್ಚು ಪ್ರಕರಣ ಸಹ ಇಳಿಮುಖವಾಗಿದೆ. ಬೇಸಗೆಯಲ್ಲಿ ಆಗಾಗ್ಗೆ ಅಲ್ಲಲ್ಲಿ ಸಂಭವಿಸುತ್ತಿರುತ್ತದೆ. ಕೆಲವೊಂದು ಕಡೆಗಳಲ್ಲಿ ಮುನ್ನೆಚ್ಚರಿಕೆಯ ಜಾಗೃತಿ ವಹಿಸಿದರೆ ಖಂಡಿತ ನಿಯಂತ್ರಣ ಸಾಧ್ಯ.– ಎಚ್.ಎಂ. ವಸಂತ ಕುಮಾರ್, ಉಡುಪಿ ಜಿಲ್ಲಾ ಅಗ್ನಿ ದಳದ ಅಧಿಕಾರಿ ಯಾವುದೇ ಅವಘಡ ಸಂಭವಿಸಿದಾಗ ತುರ್ತು ಕರೆಗಾಗಿ 112 ಅಥವಾ 101ಕ್ಕೆ ಕರೆ ಮಾಡಬಹುದು
ಉಡುಪಿ ಅಗ್ನಿ ಶಾಮಕ ಠಾಣೆ –
0820-2520333
ಮಲ್ಪೆ ಅಗ್ನಿ ಶಾಮಕ ಠಾಣೆ –
0820-2537222
ಕುಂದಾಪುರ ಅಗ್ನಿ ಶಾಮಕ ಠಾಣೆ –
08254-200724, 08254-230724
ಬೈಂದೂರು ಅಗ್ನಿ ಶಾಮಕ ಠಾಣೆ-
08254-251101, 08254-251102
ಕಾರ್ಕಳ ಅಗ್ನಿ ಶಾಮಕ ಠಾಣೆ –
08258-232223 -ಪ್ರಶಾಂತ್ ಪಾದೆ