ಚಂಡೀಗಢ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ವಿರುದ್ಧ ಹರ್ಯಾಣ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಲೈವ್ ಚಾಟ್ ನಲ್ಲಿ ಜಾತಿನಿಂದನೆ ಮಾಡಿದ ಆರೋಪದಡಿ ಎಫ್ ಐಆರ್ ದಾಖಲಿಸಲಾಗಿದೆ.
ಹಿಸಾರ್ ನ ಹನ್ಸಿ ಪೊಲೀಸ್ ಠಾಣೆಯಲ್ಲಿ ಯುವಿ ವಿರುದ್ಧ ಪ್ರಕರಣ ದಾಖಲಾಗಿದೆ. ದಲಿತ ಸಮಾಜದ ವಿರುದ್ಧ ಯುವರಾಜ್ ನಿಂದನಾತ್ಮಕ ಶಬ್ದ ಬಳಕೆ ಮಾಡಿದ್ದಾರೆಂದು ಎಂಟು ತಿಂಗಳ ಹಿಂದೆ ದೂರು ನೀಡಲಾಗಿತ್ತು. ಪೊಲೀಸರು ಯುವಿ ವಿರುದ್ಧ ಐಪಿಸಿ ಸೆಕ್ಷನ್ 153, 153ಎ, 295, 505 ಮತ್ತು ಎಸ್ ಎಸ್ ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ:ಏಕಾಂಗಿ ಪ್ರತಿಭಟನೆ ಮಾಡುತ್ತಿದ್ದ ದಿಶಾ ರವಿ: ಕೋರ್ಟ್ ನಲ್ಲಿ ಕಣ್ಣೀರು!
2020ರ ಜೂನ್ ನಲ್ಲಿ ಕ್ರಿಕೆಟಿಗ ರೋಹಿತ್ ಶರ್ಮಾ ಜೊತೆ ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಮಾತನಾಡುವ ವೇಳೆ ಜಾತಿ ನಿಂದನೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಆದರೆ ಘಟನೆಯ ಬಳಿಕ ಯುವರಾಜ್ ಕ್ಷಮೆ ಕೇಳಿದ್ದರು.
ಕ್ರಿಕೆಟಿಗರಾದ ಕುಲದೀಪ್ ಯಾದವ್ ಮತ್ತು ಯುಜುವೇಂದ್ರ ಚಾಹಲ್ ಕುರಿತು ತಮಾಷೆ ಮಾಡುವ ವೇಳೆ ಯುವರಾಜ್ ಸಿಂಗ್ ಈ ಶಬ್ದಗಳನ್ನು ಉಪಯೋಗಿಸಿದ್ದರು.
ಇದನ್ನೂ ಓದಿ:ಪ್ರೇಮಿಗಳ ದಿನಾಚರಣೆ ವಾರದಲ್ಲಿ 25 ಲಕ್ಷ ಗುಲಾಬಿ ಹೂ ಮಾರಾಟ!