Advertisement

ಮುತ್ತಪ್ಪ ರೈ ಗನ್‌ಮ್ಯಾನ್‌ಗಳ ಮೇಲೆ ಎಫ್ಐಆರ್‌

12:37 PM Oct 23, 2018 | |

ಬೆಂಗಳೂರು: ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಅವರಿಗೆ ಕಾನೂನು ನಿಯಮಗಳನ್ನು ಉಲ್ಲಂ ಸಿ ಅಂಗ ರಕ್ಷಕರನ್ನು (ಗನ್‌ ಮ್ಯಾನ್‌) ಬ್ಲ್ಯಾಕ್‌ ಕ್ಯಾಟ್‌ ಸೆಕ್ಯೂರಿಟಿ ಏಜೆನ್ಸಿ ನಿಯೋಜಿಸಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ.

Advertisement

ಆಯುಧ ಪೂಜೆ ದಿನದಂದು ರಿವಾಲ್ವರ್‌ ಸೇರಿದಂತೆ ಇನ್ನಿತರೆ ಮಾರಕಾಸ್ತ್ರಗಳನ್ನಿಟ್ಟು ಪೂಜೆ ಸಲ್ಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ), ಮುತ್ತಪ್ಪ ರೈ ಹಾಗೂ ಬ್ಲ್ಯಾಕ್‌ ಕ್ಯಾಟ್‌ ಸೆಕ್ಯೂರಿಟಿ ಏಜೆನ್ಸಿ ಮಾಲೀಕ ಕೆ. ವಸಂತಪೂವಯ್ಯ ಅವರ ವಿಚಾರಣೆ ನಡೆಸಿದಾಗ ಈ ವಿಚಾರ ಬಯಲಿಗೆ ಬಂದಿದೆ.

ಶಸ್ತ್ರಸಜ್ಜಿತ ಅಂಗರಕ್ಷಕರ ಸೇವೆಯನ್ನು ಮುತ್ತಪ್ಪ ರೈಗೆ ನೀಡುವ ಸಲುವಾಗಿ ಯಾವುದೇ ರೀತಿಯ ಒಪ್ಪಂದ ಮಾಡಿಕೊಂಡಿರಲಿಲ್ಲ. ಜತೆಗೆ, ಅಂಗರಕ್ಷಕರ ಸೇವೆ ನೀಡುವ ಸಂಬಂಧ ಪರವಾನಗಿ ಹೊಂದಿರಲಿಲ್ಲ. ಖಾಸಗಿ ಸೆಕ್ಯೂರಿಟಿ ಏಜೆನ್ಸಿ ಕಾಯಿದೆ ನಿಯಮಗಳನ್ನು ಉಲ್ಲಂ ಸಲಾಗಿತ್ತು ಎಂಬ ಅಂಶ ಕಂಡು ಬಂದ ಹಿನ್ನೆಲೆಯಲ್ಲಿ ಏಜೆನ್ಸಿ ಮಾಲೀಕ ವಸಂತ ಪೂವಯ್ಯ,

ಕೆ.ಎನ್‌ ಸುಬ್ಬಯ್ಯ, ಸಿ.ಎಸ್‌ ಭರತ್‌, ಮುತ್ತಪ್ಪ ರೈ ಅಂಗರಕ್ಷಕರಾದ ಪಿ.ಎಂ ಕಾವೇರಪ್ಪ, ಸಿ.ವಿ ಗಗನ್‌, ಮೊಣ್ಣಪ್ಪ, ರಂಜಿತ್‌ ರೈ, ಅಲೋಕ್‌ ಕುಮಾರ್‌ ಸಿಂಗ್‌ ಎಂಬುವವರ ವಿರುದ್ಧ ಸಿಸಿಬಿ ಅಧಿಕಾರಿಗಳು ಕಾಟನ್‌ ಪೇಟೆ ಠಾಣೆಯಲ್ಲಿ ಪ್ರರಕಣ ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಚಾರಣೆಗೆ ಗೈರಾದ ರೈ!: ಮತ್ತೂಂದೆಡೆ ಶಸ್ತ್ರಾಸ್ತ್ರಗಳ ಪರವಾನಗಿ ಸೇರಿ ಇನ್ನಿತರೆ ಅಂಶಗಳ ಬಗ್ಗೆ ತನಿಖೆ ಮುಂದುವರಿಸಿರುವ ಸಿಸಿಬಿ ಪೊಲೀಸರ ವಿಚಾರಣೆಗೆ ಮುತ್ತಪ್ಪ ರೈ ಸೋಮವಾರ ಹಾಜರಾಗಿರಲಿಲ್ಲ. ಅ.20ರಂದು ರೈ ಅವರನ್ನು ತೀವ್ರ ವಿಚಾರಣೆ ನಡೆಸಿದ್ದ ಸಿಸಿಬಿ ಅಧಿಕಾರಿಗಳು ತನಿಖಾ ಭಾಗವಾಗಿ ಸೋಮವಾರ ವಿಚಾರಣೆಗೆ ಆಗಮಿಸುವಂತೆ ಸೂಚಿಸಿದ್ದರು.

Advertisement

ಆದರೆ, ಅನಾರೋಗ್ಯ ಹಿನ್ನೆಲೆ ರೈ ವಿಚಾರಣೆಗೆ ಆಗಮಿಸಿರಲಿಲ್ಲ ಎಂದು ತಿಳಿದು ಬಂದಿದೆ. ಮುತ್ತಪ್ಪ ರೈ ವಿಚಾರಣೆಗೆ ಗೈರಾಗಿದ್ದರ ಸಂಬಂಧ ಅವರ ವಕೀಲ ನಾರಾಯಣಸ್ವಾಮಿ, ಮುತ್ತಪ್ಪ ರೈ ಅವರು ಕಳೆದ ಬಾರಿ ಸತತ 8 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದರಿಂದ ಸ್ವಲ್ಪ ಬಳಲಿದ್ದಾರೆ.

ಹೀಗಾಗಿ, ವಿಚಾರಣೆಗೆ ಬಂದಿಲ್ಲ. ಈ ಕುರಿತು ಸಿಸಿಬಿ ಅಧಿಕಾರಿಗಳಿಗೆ ದಾಖಲೆಗಳನ್ನು ನೀಡಿದ್ದೇನೆ. ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಸೂಚಿಸುವ ದಿನ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಜತೆಗೆ ಶಸ್ತ್ರಾಸ್ತ್ರಗಳು ಕಾನೂನು ಬದ್ಧವಾಗಿವೆ. ಯಾವುದೇ ಲೋಪವಾಗಿಲ್ಲ ಎಂದೂ ಹೇಳಿದ್ದಾರೆ.

ನೋಟಿಸ್‌ ಜಾರಿ: ಅ.17ರಂದು ಪೂಜೆಗಿಟ್ಟಿದ್ದ ಶಸ್ತ್ರಾಸ್ತ್ರಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ ಈ ಕುರಿತಂತೆ ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೋಟಿಸ್‌ ಜಾರಿಗೊಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next