Advertisement
ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ಶಿವಪ್ರಕಾಶ್ ಎಂಬಾತನು ಎ1, ರಾಗಿಣಿ ಎ2 ಮತ್ತು ಶುಕ್ರವಾರ ದಿಲ್ಲಿಯಲ್ಲಿ ಬಂಧನಕ್ಕೆ ಒಳಗಾದ ವೀರೇನ್ ಖನ್ನಾ ಎ3 ಆರೋಪಿಯಾಗಿದ್ದಾರೆ. ಅದಲ್ಲದೆ ಸೆನೆಗಲ್ ದೇಶದ ಪ್ರಜೆ ಲೂಮ್ ಪೆಪ್ಪರ್ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ.
ಆದರೆ ರಾಗಿಣಿ ಆಪ್ತ ಆರ್ ಟಿಒ ಸಿಬ್ಬಂದಿ ರವಿಶಂಕರ್ ಹೆಸರನ್ನು ಎಫ್ ಐಆರ್ ನಲ್ಲಿ ಸೇರಿಸಲಾಗಿಲ್ಲ. ಸಿಸಿಬಿ ಪೊಲೀಸರಿಗೆ ರಾಗಿಣಿ, ವೀರೇನ್ ಖನ್ನಾ ಮುಂತಾದವರ ಹೆಸರು ಹೇಳಿದ್ದು ಈತನೇ ಎನ್ನಲಾಗಿದ್ದು, ಈತನನ್ನು ಅಪ್ರೂವರ್ ಎಂದು ಹೆಸರಿಸಲಾಗಿದೆ ಎಂದು ವರದಿಯಾಗಿದೆ. ಹೀಗಾಗಿಯೇ ರವಿಶಂಕರ್ ಹೆಸರು ಎಫ್ ಐಆರ್ ನಲ್ಲಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಡ್ರಗ್ ಮಾಫಿಯಾ ತನಿಖೆ ಯಾರ ಮನೆ ಬಾಗಿಲಿಗೆ ಹೋಗುತ್ತೋ ಗೊತ್ತಿಲ್ಲ: ಸಚಿವ ಸಿಟಿ ರವಿ
Related Articles
Advertisement
ಎ1. ಶಿವಪ್ರಕಾಶ್, ಎ2. ರಾಗಿಣಿ ದ್ವಿವೇದಿ, ಎ3. ವೀರೇನ್ ಖನ್ನಾ, ಎ4. ಪ್ರಶಾಂತ್ ರಾಂಕಾ, ಎ5. ವೈಭವ್ ಜೈನ್, ಎ6. ಆದಿತ್ಯ ಆಳ್ವ, ಎ7. ಲೂಮ್ ಪೆಪ್ಪಾರ್, ಎ8. ಸೈಮನ್, ಎ9. ಪ್ರಶಾಂತ್ ಬಾಬು, ಎ10. ಅಶ್ವಿನಿ, ಎ11. ರಾಹುಲ್, ಎ12. ವಿನಯ್