ಬೆಂಗಳೂರು: ಶಿವಮೊಗ್ಗದ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿಗಳು ಜೈಲಿನೊಳಗೆ ವೀಡಿಯೋ ಕಾಲ್ ಮೂಲಕ ಮನೆಯವರೊಂದಿಗೆ ಮಾತ ನಾಡಿರುವ ಪ್ರಕರಣಕ್ಕೆ ಸಂಬಂಧಿಸಿ 11 ಮಂದಿ ಆರೋಪಿಗಳ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ವಿಚಾರಣಾದೀನ ಕೈದಿ ನಿಹಾರ್‌ನಿಂದ ಮತ್ತೂಬ್ಬ ಕೈದಿ ಮಗುªಬ್ ಮೊಬೈಲ್ ಪಡೆದುಕೊಂಡಿದ್ದ. ಹರ್ಷನ ಕೊಲೆ ಕೇಸ್‌ನಲ್ಲಿ ಬಂಧಿತರಾದ ಆರೋಪಿಗಳು ಇದನ್ನು ಗಮನಿಸಿ, ಕುಟುಂಬಸ್ಥರ ಜತೆ ಮಾತನಾಡಲು ಮೊಬೈಲ್ ಕೊಡುವಂತೆ ಕೇಳಿಕೊಂಡಿದ್ದರು.
ಮುಗ್ದುಮ್ ಅವರಿಗೆ ಮೊಬೈಲ್ ನೀಡಿದ್ದ. ಅನಂತರ ಆರೋಪಿಗಳು ಮನೆಯವರಿಗೆ ಕರೆ ಮಾಡಿ ಮಾತನಾಡಿದ್ದರು.
ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ನಿಹಾರ್ ಮತ್ತು ಮಗ್ದುಬ್ ಎಂಬವರನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ.
ಕೈದಿಗಳಿಗೆ ಮೊಬೈಲ್ ಸಿಕ್ಕಿರುವುದರಲ್ಲಿ ಸಿಬಂದಿ ಪಾತ್ರವಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.