ಮುಂಬಯಿ: ಟ್ವೀಟರ್‌ನಲ್ಲಿ ಅಶ್ಲೀಲ ಚಿತ್ರ ಟ್ವೀಟ್ ಮಾಡಿದ ಕಾರಣಕ್ಕಾಗಿ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ವಿರುದ್ದ ಶನಿವಾರ ಎಫ್ಐಆರ್ ದಾಖಲಿಸಲಾಗಿದೆ.
ಬಾಂದ್ರಾದ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳಾ ಮತ್ತು ಮಕ್ಕಳ ಪರವಿರುವ ಎನ್‌ಜಿಒವೊಂದು ರಿಷಿ ಕಪೂರ್ ಅವರ ಟ್ವೀಟ್ ವಿರುದ್ಧ ಪೋಕ್ಸೋ ಕಾಯಿದೆ ಅಡಿ ದೂರು ದಾಖಲಿಸಬೇಕೆಂದು ಮನವಿ ಮಾಡಿತ್ತು.
ಸಣ್ಣ ಬಾಲಕನೊಬ್ಬ ಹುಡುಗಿ ಮತ್ತು ಇನ್ನೊಬ್ಬ ಯುವಕ ಅಶ್ಲೀಲ ಭಂಗಿಯಲ್ಲಿ ಇರುವ ವಿಡಿಯೋ ವನ್ನು ಪೋಸ್ಟ್ ಮಾಡಿದ್ದರು.
ರಿಷಿ ಕಪೂರ್‌ಗೆ ಟ್ವೀಟರ್‌ನಲ್ಲಿ 2.6 ಮಿಲಿಯನ್ ಹಿಂಬಾಲಕರಿದ್ದಾರೆ. ಈಗಾಗಲೇ ವಿಡಿಯೋಗೆ 476 ಲೈಕ್ಸ್‌ಗಳು ಮತ್ತು 66 ಮರು ಉತ್ತರಗಳು ಬಂದಿವೆ.