Advertisement

ಹಾಕಿ ತಾರೆ ಮುಕೇಶ್‌ ಕುಮಾರ್‌ ವಿರುದ್ಧ ಎಫ್ಐಆರ್‌ ದಾಖಲು

12:30 AM Feb 14, 2019 | |

ಹೈದರಾಬಾದ್‌: ಭಾರತ ಹಾಕಿ ತಂಡ ಮಾಜಿ ನಾಯಕ, ಅರ್ಜುನ ಪ್ರಶಸ್ತಿ ವಿಜೇತ ಎನ್‌. ಮುಕೇಶ್‌ ಕುಮಾರ್‌ ಅವರ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

Advertisement

ಸಿಕಂದರಾಬಾದ್‌ನ ತಹಸೀಲ್ದಾರ್‌ ಅವರಿಂದ ಸುಳ್ಳು ಜಾತಿ ಪ್ರಮಾಣಪತ್ರ ಸೃಷ್ಟಿಸಿಕೊಂಡಿದ್ದಾರೆ ಎಂಬ ಆರೋಪದಡಿ ಬೊವೆನ್‌ಪಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ. 2 ವಾರಗಳ ಹಿಂದೆಯೇ ಎಫ್ಐಆರ್‌ ದಾಖಲಾಗಿದ್ದು, ಇತ್ತೀಚೆಗಷ್ಟೇ ಬೆಳಕಿಗೆ ಬಂದಿದೆ. ಮುಕೇಶ್‌ ಅವರ ಸಹೋದರ ಎನ್‌. ಸುರೇಶ್‌ ಕುಮಾರ್‌ ಕೂಡ ಈ ಪ್ರಕರಣದಲ್ಲಿ ಸಿಲುಕಿದ್ದಾರೆ. ಇವರಿಬ್ಬರ ಮೇಲೆ ಮೋಸ ಹಾಗೂ ಸುಳ್ಳು ದಾಖಲೆಗಳನ್ನು ನೀಡಿದ ಆರೋಪದಡಿ ಕೇಸ್‌ ದಾಖಲಾಗಿದೆ.

ಇದು 12 ವರ್ಷಗಳಷ್ಟು ಹಿಂದಿನ ಮೋಸದ ಪ್ರಕರಣವಾಗಿದ್ದು, ಕೆಲವೇ ದಿನಗಳಲ್ಲೇ ಇವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್‌ ಅಧಿಕಾರಿ ಡಿ. ರಾಜೇಶ್‌ ಹೇಳಿದ್ದಾರೆ.

ಇಂಡಿಯನ್‌ ಏರ್‌ಲೈನ್ಸ್‌ಗೆ ಮೋಸ
2007ರಲ್ಲಿ  ಮುಕೇಶ್‌ ಹಾಗೂ ಅವರ ಸಹೋದರ ಇಂಡಿಯನ್‌ ಏರ್‌ಲೈನ್ಸ್‌ನಲ್ಲಿ ಕೆಲಸ ಪಡೆಯುವ ವೇಳೆ ಸುಳ್ಳು ಜಾತಿ ಪ್ರಮಾಣಪತ್ರ ನೀಡಿದ್ದರು. ಇದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಇಂಡಿಯನ್‌ ಏರ್‌ಲೈನ್ಸ್‌ನ ವಿಚಕ್ಷಣಾ ಇಲಾಖೆ ಹೈದರಾಬಾದ್‌ನ ಕಲೆಕ್ಟರ್‌ ಬಳಿ ತನಿಖೆ ನಡೆಸಲು ಆದೇಶಿಸಿತ್ತು. ಈ ವೆಇಳೆ ಮುಕೇಶ್‌ ಹಾಗೂ ಸಹೋದರ ಸುಳ್ಳು ದಾಖಲೆಗಳನ್ನು ನೀಡಿದ್ದಾರೆ ಎಂಬುದು ಬಹಿರಂಗಗೊಂಡಿದೆ.

307 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಮುಕೇಶ್‌ 80 ಗೋಲು ಬಾರಿಸಿದ್ದಾರೆ. 3 ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next