Advertisement

ಸುಶೀಲ್‌ ವಿರುದ್ಧ ದೂರು ದಾಖಲು

06:55 AM Dec 31, 2017 | |

ಹೊಸದಿಲ್ಲಿ: ಕಾಮನ್‌ವೆಲ್ತ್‌ ಗೇಮ್ಸ್‌ಗೆ ನಡೆದ ಆಯ್ಕೆ ಟ್ರಯಲ್ಸ್‌ ವೇಳೆ ಸುಶೀಲ್‌ ಕುಮರ್‌ ಬೆಂಬಲಿಗರು ಎದುರಾಳಿ ಕುಸ್ತಿಪಟು ಪರ್ವೀನ್‌ ರಾಣ ಬೆಂಬಲಿಗರ ಜತೆ ಗುದ್ದಾಟ ನಡೆಸಿದ ಸಂಬಂಧ ದಿಲ್ಲಿ ಪೊಲೀಸರು ಶನಿವಾರ ಒಲಿಂಪಿಕ್‌ ಪದಕ ವಿಜೇತ ಸುಶೀಲ್‌ ಕುಮಾರ್‌ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Advertisement

ಐಪಿಸಿ ಸೆಕ್ಷನ್‌ 341 ಮತ್ತು 323ರ ಅನ್ವಯ ಕುಮಾರ್‌ ಮತ್ತು ಅವರ ಬೆಂಬಲಿಗರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ದಿಲ್ಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ಕಾಮನ್‌ವೆಲ್ತ್‌ ಗೇಮ್ಸ್‌ಗೆ ನಡೆದ ಆಯ್ಕೆ ಟ್ರಯಲ್ಸ್‌ ಬಳಿಕ ಸುಶೀಲ್‌ ಮತ್ತು ರಾಣ ಬೆಂಬಲಿಗರ ನಡುವೆ ಹೊಡೆದಾಟ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next