ಗಾಂಧಿನಗರ : ವಂದೇ ಭಾರತ್ ರೈಲಿಗೆ ಢಿಕ್ಕಿಯಾಗಿ ಹಾನಿಯಾಗಲು ಕಾರಣವಾಗಿದ್ದ ಎಮ್ಮೆಗಳ ಅಪರಿಚಿತ ಮಾಲೀಕರ ವಿರುದ್ಧ ರೈಲ್ವೆ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ :ಆಕಸ್ಮಿಕವಾಗಿ ಗುಂಡು ಸಿಡಿದು ಸೇನಾ ಸಿಬಂದಿ ಸಾವು
ಸೆಪ್ಟೆಂಬರ್ 30 ರಂದು ಲೋಕಾರ್ಪಣೆ ಗೊಳಿಸಲಾಗಿದ್ದ ಮುಂಬಯಿ ಸೆಂಟ್ರಲ್-ಗಾಂಧಿನಗರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಗೈರತ್‌ಪುರ ಮತ್ತು ವತ್ವಾ ನಿಲ್ದಾಣಗಳ ನಡುವೆ ಗುರುವಾರ(ಅ. 6 )ಬೆಳಗ್ಗೆ 11.20ರ ಸುಮಾರಿಗೆ ಸಂಚರಿಸುತ್ತಿದ್ದಾಗ ಎಮ್ಮೆಗಳ ಹಿಂಡು ಢಿಕ್ಕಿಯಾಗಿ ರೈಲಿನ ಮುಂಭಾಗಕ್ಕೆ ಹಾನಿಯಾಗಿತ್ತು.
“ನಾಲ್ಕು ಎಮ್ಮೆಗಳು ಮುಂಬಯಿ -ಗಾಂಧಿನಗರದ ವಂದೇ ಭಾರತ್ ದಾರಿಯಲ್ಲಿ ಇದ್ದಕ್ಕಿದ್ದಂತೆ ಬಂದ ಕಾರಣ , ಎಫ್‌ಆರ್‌ಪಿ (ಫೈಬರ್-ರೀನ್‌ಫೋರ್ಸ್ಡ್ ಪ್ಲಾಸ್ಟಿಕ್) ನಿಂದ ಮಾಡಲ್ಪಟ್ಟ ಮುಂಭಾಗ ಹಾನಿಗೊಳಗಾಗಿತ್ತು. ಘಟನೆಯಲ್ಲಿ ನಾಲ್ಕು ಎಮ್ಮೆಗಳು ಸಾವನ್ನಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಮ್ಮೆಗಳ ಅಪರಿಚಿತ ಮಾಲೀಕರ ವಿರುದ್ಧ ಆರ್‌ಪಿಎಫ್ ಎಫ್‌ಐಆರ್ ದಾಖಲಿಸಿದೆ ಎಂದು ಅಹಮದಾಬಾದ್ ವಿಭಾಗದ ಡಬ್ಲ್ಯುಆರ್‌ನ ಹಿರಿಯ ವಕ್ತಾರ ಜಿತೇಂದ್ರ ಕುಮಾರ್ ಜಯಂತ್ ಹೇಳಿದ್ದಾರೆ.
ರೈಲ್ವೆ ಕಾಯಿದೆ, 1989 ರ ಸೆಕ್ಷನ್ 147 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ, ಇದು ರೈಲ್ವೆಯ ಯಾವುದೇ ಭಾಗಕ್ಕೆ ಅನಧಿಕೃತ ಪ್ರವೇಶ ಮತ್ತು ಅದರ ಆಸ್ತಿಯನ್ನು ದುರುಪಯೋಗಪಡಿಸಿಕೊಳ್ಳುವ ಬಗ್ಗೆ ವ್ಯವಹರಿಸುತ್ತದೆ ಎಂದು ಆರ್‌ಪಿಎಫ್ ಇನ್ಸ್‌ಪೆಕ್ಟರ್ ಪ್ರದೀಪ್ ಶರ್ಮಾ ವತ್ವಾ ರೈಲ್ವೆ ನಿಲ್ದಾಣದಲ್ಲಿ ಪೋಸ್ಟ್ ಮಾಡಿದ್ದಾರೆ.