ಹೊಸದಿಲ್ಲಿ: ಭಾರತೀಯ ಕ್ರಿಕೆಟಿಗರಾದ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಪುತ್ರಿಯರ ವಿರುದ್ಧ ಅಸಭ್ಯವಾಗಿ ಕಾಮೆಂಟ್ ಮಾಡಿದ ಆರು ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ದೆಹಲಿ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿದ್ದಾರೆ.
ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ನೀಡಿದ ನೋಟಿಸ್ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಇಬ್ಬರು ಕ್ರಿಕೆಟಿಗರ ಪುತ್ರಿಯರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಲಿವಾಲ್ ಕೋರಿದ್ದರು.
“ನನ್ನ ಸೂಚನೆಯ ನಂತರ, ದೆಹಲಿ ಪೊಲೀಸರು ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಅವರ ಪುತ್ರಿಯರ ವಿರುದ್ಧ ಅಸಭ್ಯ ಕಾಮೆಂಟ್ ಮಾಡಿದ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಶೀಘ್ರದಲ್ಲೇ ಎಲ್ಲಾ ಆರೋಪಿಗಳನ್ನು ಬಂಧಿಸಿ ಕಂಬಿಗಳ ಹಿಂದೆ ಕಳುಹಿಸಲಾಗುವುದು” ಎಂದು ಮಲಿವಾಲ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ʼಪುಷ್ಪ-2ʼ ನಿಂದ ಹೊರ ಬಿದ್ದಿಲ್ಲ ರಶ್ಮಿಕಾ: ಕೊಡಗಿನ ಚೆಲುವೆ ಕೊಟ್ಟ ಅಪ್ಡೇಟ್ ಏನು?
ಕ್ರಿಕೆಟಿಗರಾದ ಕೊಹ್ಲಿ ಮತ್ತು ಧೋನಿ ಅವರ ಪುತ್ರಿಯರು ಮತ್ತು ಪತ್ನಿಯರ ವಿರುದ್ಧ ನಿಂದನೆ ಮತ್ತು ಲೈಂಗಿಕ ಕಾಮೆಂಟ್ ಗಳನ್ನು ಟ್ವೀಟ್ ಮಾಡುವ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ಗಾಗಿ ಡಿಸಿಡಬ್ಲ್ಯೂ ಮುಖ್ಯಸ್ಥರು ದೆಹಲಿ ಪೊಲೀಸ್ ಸೈಬರ್ ಸೆಲ್‌ಗೆ ನೋಟಿಸ್ ನೀಡಿದ್ದರು.