ಹೊಸದಿಲ್ಲಿ\ ಲಕ್ನೋ: ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸೇರಿದಂತೆ 203 ಕಾಂಗ್ರೆಸ್ ನಾಯಕರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.
ಗ್ರೇಟರ್ ನೋಯ್ಡಾದ ಇಕೋಟೆಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೋವಿಡ್-19 ಸೋಂಕಿನ ಕಾರಣದಿಂದ ಜಿಲ್ಲೆಯಲ್ಲಿ ವಿಧಿಸಲಾಗಿದ್ದ ಸೆಕ್ಷನ್ 144 ಅನ್ನು ಉಲ್ಲಂಘಿಸದ ಕಾರಣ ಎಫ್ ಐಆರ್ ದಾಖಲಿಸಲಾಗಿದೆ.
ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಗ್ಯಾಂಗ್ ರೇಪ್ ನಲ್ಲಿ ಸಾವನ್ನಪ್ಪಿದ ದಲಿತ ಯುವತಿಯ ಕುಟುಂಬಸ್ಥರ ಭೇಟಿಗಾಗಿ ಗುರುವಾರ ತೆರಳಿಲು ಯತ್ನಿಸಿದ್ದ ರಾಹುಲ್ ಮತ್ತು ಪ್ರಿಯಾಂಕಾ ರನ್ನು ಗ್ರೇಟರ್ ನೋಯ್ಡಾದಲ್ಲಿ ತಡೆದ ಪೊಲೀಸರು ಬಂಧಿಸಿ, ಮರಳಿ ದೆಹಲಿಗೆ ವಾಪಸ್ ಕಳುಹಿಸಿದ್ದರು. ಈ ವೇಳೆ ತಳ್ಳಾಟಗಳು ನಡೆದು ರಾಹುಲ್ ನೆಲಕ್ಕೆ ಬಿದ್ದಿದ್ದರು.
ಇದನ್ನೂ ಓದಿ:ನೋಯ್ಡಾ ಹೈವೇಯಲ್ಲಿ ಹೈಡ್ರಾಮಾ: ಯುಪಿ ಪೊಲೀಸರ ತಳ್ಳಾಟದಿಂದ ಕೆಳಕ್ಕೆ ಬಿದ್ದ ರಾಹುಲ್ ಗಾಂಧಿ
ಎಫ್ ಐಆರ್ ನಲ್ಲಿ 153 ಜನರ ಹೆಸರನ್ನು ದಾಖಲಿಸಲಾಗಿದೆ. ಉಳಿದ 50 ಅಪರಿಚಿತರೆಂದು ಹೆಸರಿಸಲಾಗಿದೆ. ಸೆ.332, 353, 427, 323, 354, 147, 148 ಅಡಿ ಪ್ರಕರಣ ದಾಖಲಿಸಲಾಗಿದೆ.