Advertisement

ಅಮಿತ್ ಶಾ ಗಬ್ಬರ್ ಅಂತೆ! ಶೋಲೆ ದೃಶ್ಯ ತಿರುಚಿದ ಆಪ್ ವಿರುದ್ಧ ಬಿಜೆಪಿ ದೂರು

09:58 AM Feb 08, 2020 | Nagendra Trasi |

ನವದೆಹಲಿ: ದಿಲ್ಲಿ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ವಾಗ್ವಾದ, ವಾಕ್ಸಮರ ಮುಂದುವರಿದಿರುವ ನಡುವೆಯೇ ಬಾಲಿವುಡ್ ನ ಶೋಲೆ ಸಿನಿಮಾದ ಪಾತ್ರವೊಂದನ್ನು ಅಮಿತ್ ಶಾಗೆ ಹೋಲಿಸಿ ವಿಡಿಯೋ ಹರಿಯಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಆಪ್ ವಿರುದ್ಧ ದೂರು ದಾಖಲಿಸಿರುವುದಾಗಿ ವರದಿ ತಿಳಿಸಿದೆ.

Advertisement

ಬಿಜೆಪಿ ದೂರಿನ ಪ್ರಕಾರ, ಆಮ್ ಆದ್ಮಿ ಪಕ್ಷದ ಬೆಂಬಲಿಗರು ಬಿಜೆಪಿಯ ವರ್ಚಸ್ಸನ್ನು ಕೆಡಿಸುವ ನಿಟ್ಟಿನಲ್ಲಿ ನಕಲಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವುದಾಗಿ ಆರೋಪಿಸಿದೆ.

ಬಾಲಿವುಡ್ ನ ಶೋಲೆ ಸಿನಿಮಾದ ಗಬ್ಬರ್ ಪಾತ್ರವನ್ನು ತಿರುಚಿ ಶಾ ಅವರನ್ನು ಗಬ್ಬರ್ ಎಂಬಂತೆ ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಶೋಲೆ ಸಿನಿಮಾದಲ್ಲಿ ಗಬ್ಬರ್ ವಿಲನ್ ಪಾತ್ರಧಾರಿಯಾಗಿರುವುದಾಗಿ ವರದಿ ವಿವರಿಸಿದೆ.

ಜನವರಿ 25ರಂದು ಆಮ್ ಆದ್ಮಿ ಪಕ್ಷದ ವಿರುದ್ಧ ದಿಲ್ಲಿಯ ಸ್ಪೆಷಲ್ ಸೆಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next