ಹೆಲ್ಸಿಂಕಿ: ಇತ್ತೀಚೆಗಷ್ಟೇ ಫಿನ್ ಲ್ಯಾಂಡ್ ಸರ್ಕಾರ ಘೋಷಿಸಿದ್ದ “90 ದಿನಗಳ ಫಿನ್ ಲ್ಯಾಂಡ್ ವಲಸೆ” ಯೋಜನೆಗೆ ಟೆಕ್ಕಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈವರೆಗೆ 5,300ಕ್ಕೂ ಹೆಚ್ಚು ಅರ್ಜಿಗಳು ಬಂದಿರುವುದಾಗಿ ವರದಿ ತಿಳಿಸಿದೆ.
ಸುಮಾರು ಒಂದು ತಿಂಗಳ ಹಿಂದೆ ಫಿನ್ ಲ್ಯಾಂಡ್ ಸರ್ಕಾರ ಅಮೆರಿಕದ ಆಯ್ದ ಟೆಕ್ಕಿಗಳಿಗಾಗಿ “90 ದಿನಗಳ ಫಿನ್ “ ಯೋಜನೆ ಘೋಷಿಸಿತ್ತು. ಈ ಯೋಜನೆಯಲ್ಲಿ ಅಮೆರಿಕದ ತಾಂತ್ರಿಕ ವೃತ್ತಿಪರರು 90 ದಿನಗಳ ಕಾಲ ಫಿನ್ ಲ್ಯಾಂಡ್ ನಲ್ಲಿ ವಾಸ್ತವ್ಯ ಹೂಡುವ ಅವಕಾಶವಿದೆ. ಅಲ್ಲದೇ ಇಲ್ಲಿಯ ಬದುಕಿನ ಅನಭವ ಪಡೆಯುಬಹುದಾಗಿದೆ. 90 ದಿನಗಳ ಬಳಿಕ ಟೆಕ್ಕಿಗಳು ಫಿನ್ ಲ್ಯಾಂಡ್ ನಿಂದ ಶಾಶ್ವತವಾಗಿ ಹೋಗಬೇಕೆ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದಾಗಿ ಎಂದು ವಿವರಿಸಿದೆ.
ಫಿನ್ ಲ್ಯಾಂಡ್ ಯುರೋಪಿನ ಇತರೆ ದೇಶಗಳಂತೆ ತುಂಬಾ ಜನಪ್ರಿಯ ಅಥವಾ ಆದ್ಯತೆಯ ವಲಸೆಯ ತಾಣವಲ್ಲ. ಸ್ಥಳ ಬದಲಾವಣೆಯ ಅಗ್ರಸ್ಥಾನದ ಪಟ್ಟಿಯಲ್ಲಿಯೂ ನಾವು (ಫಿನ್ ಲ್ಯಾಂಡ್) ಇಲ್ಲ. ಆದರೆ ನಮಗೆ ತಿಳಿದಿರುವಂತೆ ಒಂದು ಬಾರಿ ಫಿನ್ ಲ್ಯಾಂಡ್ ಗೆ ಬಂದರೆ ಅವರು ಇಲ್ಲಿ ಉಳಿಯಲು ಒಲವು ತೋರುತ್ತಾರೆ ಎಂದು ಜೋಹನ್ನಾ ಹುರ್ರೆ ತಿಳಿಸಿದ್ದಾರೆ.
ಜಾಗತಿಕವಾಗಿ ಪ್ರತಿಭಾವಂತರನ್ನು ಕರೆಯಿಸಿಕೊಳ್ಳಲು ದೊಡ್ಡ ಮಟ್ಟದ ಸ್ಪರ್ಧೆಯೇ ಇದೆ. ಆ ನಿಟ್ಟಿನಲ್ಲಿ ನಾವು (ಫಿನ್ ಲ್ಯಾಂಡ್) ಕೂಡಾ ಸೃಜನಾತ್ಮಕವಾಗಿ ಆಲೋಚಿಸಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ವಿವರಿಸಿದೆ.
ಹುರ್ರೆ ಅವರ ಪ್ರಕಾರ, 90 ದಿನಗಳ ವಲಸೆ ಯೋಜನೆಯಲ್ಲಿ ಅಮೆರಿಕ ಮತ್ತು ಕೆನಡಾದಿಂದ ಅತೀ ಹೆಚ್ಚು ಮಂದಿ ಅರ್ಜಿಯನ್ನು ಫಿನ್ ಲ್ಯಾಂಡ್ ಸ್ವೀಕರಿಸಿದೆ. ಒಂದು ಬಾರಿ ಜನರು ಇಲ್ಲಿಗೆ ಬಂದು ಪರಿಸ್ಥಿತಿಯನ್ನು ಅವಲೋಕಿಸಿದರೆ ಅವರು ನಿಜಕ್ಕೂ ಫಿನ್ ಲ್ಯಾಂಡ್ ನಲ್ಲಿಯೇ ಉಳಿಯಲು ಬಯಸುತ್ತಾರೆ ಎಂಬ ವಿಶ್ವಾಸ ನಮ್ಮದು ಎಂದು ತಿಳಿಸಿದ್ದಾರೆ.
ಶೇ.30ರಷ್ಟು ಅಮೆರಿಕ ಮತ್ತು ಕೆನಡಾದಿಂದ ಫಿನ್ ಲ್ಯಾಂಡ್ ನಲ್ಲಿ 90 ದಿನಗಳ ಕಾಲ ವಾಸವಾಗಿರಲು ಅರ್ಜಿಯನ್ನು ಹಾಕಿದ್ದಾರೆ. ಬ್ರಿಟನ್ ನಿಂದಲೂ ಕೆಲವು ಅರ್ಜಿ ಬಂದಿದ್ದು, ಸುಮಾರು 60 ಅರ್ಜಿಗಳು ಹೂಡಿಕೆದಾರರಿಂದ ಬಂದಿರುವುದಾಗಿ ಹುರ್ರೆ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.