Advertisement

Finland Games: ನೀರಜ್‌ ಚೋಪ್ರಾ ಮರಳಿ ಕಣಕ್ಕೆ

12:30 AM Jun 18, 2024 | Team Udayavani |

ಟುರ್ಕು (ಫಿನ್ಲಂಡ್‌): ಒಲಿಂಪಿಕ್‌ ಚಾಂಪಿಯನ್‌ ಖ್ಯಾತಿಯ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಸಣ್ಣದೊಂದು ಬ್ರೇಕ್‌ ಬಳಿಕ ಮರಳಿ ಸ್ಪರ್ಧಾಕಣಕ್ಕೆ ಇಳಿಯಲಿದ್ದಾರೆ. ಮಂಗಳವಾರ ಇಲ್ಲಿ ಆರಂಭವಾಗಲಿರುವ “ಪಾವೊ ನುರ್ಮಿ ಗೇಮ್ಸ್‌’ನಲ್ಲಿ ಸ್ಪರ್ಧಿಸಲಿದ್ದಾರೆ.

Advertisement

26 ವರ್ಷದ ಸೂಪರ್‌ಸ್ಟಾರ್‌ ಆ್ಯತ್ಲೀಟ್‌ ಈ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಸ್ಪರ್ಧಿ. ಜರ್ಮನಿಯ 19 ವರ್ಷದ ಜಾವೆಲಿನ್‌ ಎಸೆತಗಾರ ಮ್ಯಾಕ್ಸ್‌ ಡೆಹಿ°ಂಗ್‌ ಈ ಕೂಟದ ಮತ್ತೋರ್ವ ಪ್ರಮುಖ ಕ್ರೀಡಾಪಟು. ಅವರು ಇತ್ತೀಚೆಗೆ 90 ಮೀ. ದೂರದ ಸಾಧನೆಯೊಂದಿಗೆ ಸುದ್ದಿಯಾಗಿದ್ದರು. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ನೀರಜ್‌ ಚೋಪ್ರಾಗೆ ಡೆಹಿ°ಂಗ್‌ ಅವರಿಂದ ಭಾರೀ ಸ್ಪರ್ಧೆ ಎದುರಾಗಲಿದೆ ಎಂದು ಭಾವಿಸಲಾಗಿದೆ. ಇವರಿಬ್ಬರ ಫಿನ್ಲಂಡ್‌ ಮುಖಾಮುಖೀ ಕುತೂಹಲ ಮೂಡಿಸಿದೆ.

ಆತಿಥೇಯ ದೇಶದ ನೆಚ್ಚಿನ ತ್ರೋವರ್‌ ಒಲಿವರ್‌ ಹೆಲಾಂಡರ್‌ ಕೂಡ ಇಲ್ಲಿ ಕಣಕ್ಕಿಳಿ ಯು ವರು. 2022ರ ಕ್ರೀಡಾಕೂಟದಲ್ಲಿ ಇವರು ಚೋಪ್ರಾ ಅವರನ್ನು ಮೀರಿಸಿ ಚಿನ್ನದ ಪದಕ ಜಯಿಸಿದ್ದರು. ಎರಡು ಬಾರಿಯ ವಿಶ್ವ ಚಾಂಪಿಯನ್‌, ಗ್ರೆನೆಡಾದ ಆ್ಯಂಡರ್ಸನ್‌ ಪೀಟರ್ ಮತ್ತು 2012ರ ಒಲಿಂಪಿಕ್‌ ಚಾಂಪಿಯನ್‌ ಆಗಿರುವ ಟ್ರಿನಿಟಾಡ್‌ ಆ್ಯಂಡ್‌ ಟೊಬಾಗೊದ ಕೆಶೋರ್ನ್ ವಾಲ್ಕಾಟ್‌ ಕೂಡ ಫಿನ್ಲಂಡ್‌ ಗೇಮ್ಸ್‌ನಲ್ಲಿ ಸ್ಪರ್ಧಿಸುವರು.

Advertisement

Udayavani is now on Telegram. Click here to join our channel and stay updated with the latest news.

Next