Advertisement

ಸಂತೋಷಕ್ಕೆ ಫಿನ್ಲಂಡ್‌ ಬೆಸ್ಟ್‌

12:20 AM Mar 19, 2022 | Team Udayavani |

ಹೊಸದಿಲ್ಲಿ: ಯಾವ ದೇಶದಲ್ಲಿ ಜನರು ಹೆಚ್ಚು ಸಂತೋಷವಾಗಿ ಬದುಕುತ್ತಿದ್ದಾರೆ ಗೊತ್ತಾ? ಇದಕ್ಕೆ ಉತ್ತರ ಫಿನ್ಲಂಡ್‌.

Advertisement

ವಿಶ್ವಸಂಸ್ಥೆಯೇ ಸಮೀಕ್ಷೆ ನಡೆಸಿ ಸೂಚ್ಯಂಕವನ್ನು ಶುಕ್ರವಾರ ಹೊರಬಿಟ್ಟಿದ್ದು, ಅದರ ಪ್ರಕಾರ ಫಿನ್ಲಂಡ್‌ ಅತೀ ಸಂತೋಷದ ರಾಷ್ಟ್ರವಾಗಿದ್ದರೆ, ಭಾರತ ಪಟ್ಟಿಯ ಕೊನೆಯಿಂದ 11ನೇ ಸ್ಥಾನ ಪಡೆದು ಕೊಂಡಿದೆ.  ದೇಶದ ಜಿಡಿಪಿ, ಆರ್ಥಿಕ ಶಕ್ತಿ, ಸಾಮಾಜಿಕ ಚಟುವಟಿಕೆಗಳು ಹೀಗೆ ಅನೇಕ ಮಾನದಂಡಗಳ ಆಧಾರದಲ್ಲಿ ರಾಷ್ಟ್ರಗಳಿಗೆ ಸೊನ್ನೆಯಿಂದ 10ರ ವರೆಗೆ ಅಂಕ ಕೊಡಲಾಗುತ್ತದೆ. ಅದರಂತೆ 2022ನೇ ಸಾಲಿನಲ್ಲಿ ಒಟ್ಟು 146 ರಾಷ್ಟ್ರಗಳ ಸೂಚ್ಯಂಕ ರಚಿಸಲಾಗಿದೆ.

ಅದರಲ್ಲಿ ತಾಲಿಬಾನ್‌ ಆಕ್ರಮಣದಿಂದ ನಲುಗಿರುವ ಅಫ್ಘಾನಿಸ್ಥಾನ ಕೊನೆಯ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷದ 149 ರಾಷ್ಟ್ರಗಳ ಸೂಚ್ಯಂಕದಲ್ಲಿ 139ನೇ ಸ್ಥಾನದಲ್ಲಿದ್ದ ಭಾರತ ಈ ಬಾರಿ ಕೊಂಚ ಏರಿಕೆ ಕಂಡು 136ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಮೊದಲ ಸ್ಥಾನದಲ್ಲಿರುವ ಫಿನ್ಲಂಡ್‌ ಕಳೆದ ಐದು ವರ್ಷಗಳಿಂದಲೂ ಆ ಸ್ಥಾನವನ್ನು ತನ್ನ ಬಳಿಯೇ ಇಟ್ಟುಕೊಳ್ಳುವಲ್ಲಿ ಸಫ‌ಲವಾಗಿದೆ. 2ನೇ ಸ್ಥಾನದಲ್ಲಿ ಡೆನ್ಮಾರ್ಕ್‌, 3ನೇ ಸ್ಥಾನದಲ್ಲಿ ಐಲ್ಯಾಂಡ್‌ ಇದೆ. 16ನೇ ಸ್ಥಾನದಲ್ಲಿ ಅಮೆರಿಕವಿದ್ದರೆ, 17ನೇ ಸ್ಥಾನದಲ್ಲಿ ಯುನೈಡೆಟ್‌ ಕಿಂಗ್‌ಡಮ್‌ ಇದೆ.

Advertisement

Udayavani is now on Telegram. Click here to join our channel and stay updated with the latest news.

Next