Advertisement

“ನಾಕು ಮುಖ’ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯ

11:02 AM Feb 18, 2018 | |

ದರ್ಶನ್‌ ರಾಗ್‌ ನಿರ್ಮಾಣದ “ನಾಕುಮುಖ” ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರಕ್ಕೆ ಇಪ್ಪತ್ತೆ„ದು ದಿನಗಳ ಕಾಲ ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಫೆಬ್ರವರಿ ಮೂರನೇ ವಾರದಿಂದ ಬೆಂಗಳೂರಿನಲ್ಲಿ ದ್ವಿತೀಯ ಹಂತದ ಚಿತ್ರೀಕರಣ ಶುರುವಾಗಲಿದೆ.

Advertisement

ಕುಶಾನ್‌ ಗೌಡ ಕಥೆ ಬರೆದು ಗೀತರಚನೆ ಮಾಡಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಹಲಗೂರು ವೆಂಕಟೇಶ್‌ ಸಂಭಾಷಣೆ ಬರೆದು ಸಹ ನಿರ್ದೇಶನ ಮಾಡುತ್ತಿದ್ದಾರೆ. ಹರಿಬಾಬು ಸಂಗೀತ ನೀಡಿರುವ ಈ ಚಿತ್ರಕ್ಕೆ ರಂಗಸ್ವಾಮಿ ಅವರ ಛಾಯಾಗ್ರಹಣವಿದೆ. ಮಹೇಶ್‌ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಕುಶಾನ್‌ ಗೌಡ, ದರ್ಶನ್‌ ರಾಗ್‌, ಅಮೃತ ಅಯ್ಯಂಗಾರ್‌, ಪ್ರೀತಿ, ಅನೀಶ್‌, ಯಶವಂತ್‌, ಸುಚೀಂದ್ರ ಶೆಟ್ಟಿ, ಕಿರಣ್‌ ಸೂರ್ಯ ಮುಂತಾದವರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next