Advertisement

ಡಬ್ಬಿಂಗ್ ಮುಗಿಸಿದ “ಸಾರ್ವಭೌಮ’: ಪೋಟೋ ವೈರಲ್

03:00 PM Nov 13, 2018 | |

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ “ನಟ ಸಾರ್ವಭೌಮ’ ಚಿತ್ರದ ಲುಕ್​ ಹಾಗೂ ಪೋಸ್ಟರ್​ಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ತೆರೆ ಮೇಲೆ ಪುನೀತ್‍ರನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ಚಿತ್ರತಂಡದಿಂದ ಬೊಂಬಾಟ್ ಸುದ್ದಿಯೊಂದು ಬಂದಿದೆ.

Advertisement

ಹೌದು! ಪುನೀತ್ ರಾಜಕುಮಾರ್ ತಮ್ಮ ಪಾಲಿನ ಡಬ್ಬಿಂಗ್​ ಕಂಪ್ಲೀಟ್ ಮಾಡಿದ್ದು, ಆ ಖುಷಿಯಲ್ಲಿ ಸ್ಟುಡಿಯೋದಲ್ಲಿ ಸೆಲ್ಫಿ ತೆಗೆದುಕೊಂಡು ಆ ಫೋಟೋವನ್ನು ಟ್ವೀಟರ್ ನಲ್ಲಿ ಶೇರ್ ಮಾಡಿದ್ದಾರೆ. “ಕೆಜಿಎಫ್’ ಚಿತ್ರಕ್ಕೆ ಶುಭ ಕೋರುವುದರ ಜೊತೆಗೆ ತಮ್ಮ “ನಟ ಸಾರ್ವಭೌಮ’ ಚಿತ್ರದ ಡಬ್ಬಿಂಗ್ ಮುಗಿಸಲಾಗಿದೆ ಎಂದು ಹೇಳಿ ಒಂದು ಫೋಟೋವನ್ನು ಪುನೀತ್ ಪೋಸ್ಟ್ ಮಾಡಿದ್ದಾರೆ.
 

ಮುಖ್ಯವಾಗಿ ಪುನೀತ್ ಇಲ್ಲಿಯವರೆಗೂ ತಮ್ಮ ಟ್ವೀಟರ್ ಖಾತೆಯಲ್ಲಿ ಒಟ್ಟು ನಾಲ್ಕು ಟ್ವೀಟ್‍ಗಳನ್ನು ಮಾತ್ರ ಮಾಡಿದ್ದು, 20 ಸಾವಿರ ಮಂದಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಇನ್ನು ರಾಕ್​ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಪುನೀತ್‌ ರಾಜಕುಮಾರ್‌ ಹಾಗೂ ಪವನ್ ಒಡೆಯರ್ ಕಾಂಬಿನೇಷನ್​​​​ನ ಎರಡನೇ ಚಿತ್ರ. 

ಪುನೀತ್​​​ ರಾಜಕುಮಾರ್ ಮೊದಲ ಬಾರಿಗೆ ಫೋಟೋ ಜರ್ನಲಿಸ್ಟ್ ಪಾತ್ರ ಮಾಡುತ್ತಿದ್ದು, ನಾಯಕಿಯರಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಮಾಲಿವುಡ್ ಬೆಡಗಿ ಅನುಪಮ ಪರಮೇಶ್ವರನ್ ನಟಿಸುತ್ತಿದ್ದಾರೆ. ಇಮಾನ್‌ ಡಿ ಸಂಗೀತ ಹಾಗೂ ವೈದಿ ಛಾಯಾಗ್ರಹಣ ಚಿತ್ರಕ್ಕಿದ್ದು, ಸದ್ಯದಲ್ಲೇ ತೆರೆ ಮೇಲೆ ಬರಲು “ನಟ ಸಾರ್ವಭೌಮ’ ಸಜ್ಜಾಗಿದ್ದಾನೆ. 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next