Advertisement

DNA Test: ಐಸ್ ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆ ಪ್ರಕರಣ… DNA ವರದಿ ಹೇಳಿದ್ದೇನು?

10:52 AM Jun 28, 2024 | Team Udayavani |

ಮುಂಬಯಿ: ಇತ್ತೀಚಿಗೆ ಮುಂಬಯಿ ಮೂಲದ ವೈದ್ಯೆಯೊಬ್ಬರು ಆನ್ ಲೈನ್ ಮೂಲಕ ಆರ್ಡರ್ ಮಾಡಿದ್ದ ಐಸ್ ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.

Advertisement

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಐಸ್ ಕ್ರೀಮ್ ನಲ್ಲಿ ಪತ್ತೆಯಾದ ಬೆರಳಿನ ಡಿಎನ್ ಎ ಪರೀಕ್ಷೆ ನಡೆಸಿದ್ದು ಇದೀಗ ಪರೀಕ್ಷಾ ವರದಿ ಪೊಲೀಸರ ಕೈ ಸೇರಿದೆ ಅದರಂತೆ ಈ ಮೊದಲು ಪೊಲೀಸರು ಏನು ಮಾಹಿತಿ ನೀಡಿದ್ದರು ಅದು ಇದೀಗ ನಿಜಗಾಗಿದೆ ಎನ್ನಲಾಗಿದೆ. ಅಂದರೆ ಪುಣೆಯಲ್ಲಿರುವ ಐಸ್ ಕ್ರೀಮ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಯುವಕನ ಬೆರಳು ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು ಅದರಂತೆ ಯುವಕನನ್ನು ಡಿಎನ್ ಎ ಪರೀಕ್ಷೆಗೆ ಒಳಪಡಿಸಲಾಗಿತ್ತು ಮತ್ತು ಐಸ್ ಕ್ರೀಮ್ ನಲ್ಲಿ ಪತ್ತೆಯಾದ ಬೆರಳಿನ ಡಿಎನ್ ಎ ಪರೀಕ್ಷೆ ನಡೆಸಲಾಗಿತ್ತು ಇದೀಗ ಎರಡು ವರದಿ ಬಂದಿದ್ದು ಐಸ್ ಕ್ರೀಮ್ ನಲ್ಲಿ ಪತ್ತೆಯಾದ ಬೆರಳು ಪುಣೆಯ ಐಸ್ ಕ್ರೀಮ್ ಫ್ಯಾಕ್ಟರಿ ಯಲ್ಲಿ ಕೆಲಸ ಮಾಡುತ್ತಿದ್ದ ಯುವನದ್ದೇ ಎಂಬುದು ಸಾಭೀತಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಫ್ಯಾಕ್ಟರಿ ಪರಿಶೀಲನೆಗೆ ಹೋಗಿದ್ದ ಪೊಲೀಸರಿಗೆ ಅಲ್ಲಿ ಕೆಲಸ ಮಾಡುವ ಯುವಕ ಕೈ ಬೆರಳಿಗೆ ಗಾಯವಾಗಿರುವ ಮಾಹಿತಿ ಲಭ್ಯವಾಗಿತ್ತು ಅದರ ಆಧಾರದಲ್ಲಿ ಡಿಎನ್ ಎ ಪರೀಕ್ಷೆ ನಡೆಸಿದಾಗ ವರದಿಯಲ್ಲಿ ಎರಡೂ ಹೊಂದಾಣಿಕೆಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Kampli: ಅರಣ್ಯ ಇಲಾಖೆಯ ಬಲೆಗೆ ಬೀಳದ ಮೊಸಳೆ ಮಿನುಗಾರರ ಬಲೆಗೆ ಬಿತ್ತು…

Advertisement

Udayavani is now on Telegram. Click here to join our channel and stay updated with the latest news.

Next