Advertisement

ಮಾಸ್ಕ್ ಧರಿಸದವರಿಂದ ದಂಡ ವಸೂಲಿ

09:58 AM Jun 30, 2020 | Suhan S |

ಗುರುಮಠಕಲ್‌: ಪಟ್ಟಣದಲ್ಲಿ ಮಾಸ್ಕ್ಧರಿಸದೇ ಸಂಚರಿಸುವವರಿಗೆ ಪೊಲೀಸ್‌ ಇಲಾಖೆ ಪುರಸಭೆ ಅಧಿಕಾರಿಗಳು ದಂಡ ವಿಧಿಸಿ ಬಿಸಿ ಮುಟ್ಟಿಸಿದರು. ಈ ವೇಳೆ ಮಾತನಾಡಿದ ಡಿವೈಎಸ್ಪಿ ಯು. ಶರಣಪ್ಪ, ಪಟ್ಟಣದಲ್ಲಿ ಸಾಕಷ್ಟು ಮಂದಿ ಮಾಸ್ಕ್ ಧರಿಸದೇ ಸಂಚರಿಸುತ್ತಿರುವುದು ಗಮನಕ್ಕೆ ಬಂದಿದೆ. ಸುಮಾರು 16,200 ರೂ. ದಂಡ ವಸೂಲಿ ಮಾಡಲಾಗಿದೆ ಎಂದರು.

Advertisement

ಕೋವಿಡ್ ವಿರುದ್ಧ ನಿರಂತರ ಹೋರಾಟ ಅಗತ್ಯವಾಗಿದೆ. ಈ ಹೋರಾಟ ಮುಗಿಯುವುದಿಲ್ಲ. ಮಾಸ್ಕ್ ಬಳಕೆಯಿಂದ ಶೇ.50ರಷ್ಟು ಸೋಂಕು ತಡೆಯಬಹುದು. ಈ ಪ್ರಯೋಗ ಇತರ ರಾಷ್ಟ್ರಗಳಲ್ಲಿಯೂ ಯಶಸ್ವಿಯಾಗಿದೆ. ಆದ್ದರಿಂದ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಸಂಚರಿಸಬೇಕು. ಸುರಕ್ಷಿತ ಅಂತರ ಕಾಪಾಡಬೇಕು. ಸ್ಯಾನಿಟೈಜರ್‌ನಿಂದ ಕೈ ತೊಳೆದುಕೊಳ್ಳಬೇಕು ಎಂದರು.

ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವೆಂಕಟೇಶ, ಉಪ ತಹಶೀಲ್ದಾರ್‌ ಮಹಮ್ಮದ ಇಜಾಜ್‌ ಉಲ್‌ಹಕ್‌, ಸಿಪಿಐ ದೇವೇಂದ್ರಪ್ಪ, ಪಿಎಸ್‌ಐ ಶೀಲಾ ನ್ಯಾಮನ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next